ಹೊಸದಿಗಂತ ವರದಿ, ಮೈಸೂರು:
ಯುದ್ಧ ಪೀಡಿತ ಉಕ್ರೇನ್ ನಲ್ಲಿದ್ದ 26 ಮಂದಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮೈಸೂರಿಗೆ ಬಂದಿದ್ದಾರೆ.
ಉಕ್ರೇನ್‌ನಲ್ಲಿ ಮೈಸೂರಿನ 32 ವಿದ್ಯಾರ್ಥಿಗಳು ಎಂಬಿಬಿಎಸ್ ಓದುತ್ತಿದ್ದರು. ಇವರಲ್ಲಿ ಹಲವಾರು ಮಂದಿ ಅಲ್ಲಿನ ಕೀವ್, ಖಾರ್ಕೀವ್‌ನಲ್ಲಿದ್ದರು. ರಷ್ಯಾ ದಾಳಿ ಆರಂಭಿಸಿದ ಬಳಿಕ ಕೇಂದ್ರ ಸರ್ಕಾರ ನಡೆಸುತ್ತಿರುವ ಆಪರೇಷನ್ ಗಂಗಾದ ಮೂಲಕ ಒಟ್ಟು 26 ಮಂದಿ ವಿದ್ಯಾಥಿಗಳು ದೆಹಲಿಯಿಂದ, ಬೆಂಗಳೂರು, ಅಲ್ಲಿಂದ ಮೈಸೂರಿಗೆ ಬೇರೆ, ಬೇರೆ ದಿನಗಳಲ್ಲಿ ಬಂದು ತಮ್ಮ ಪೋಷಕರನ್ನು ಸೇರಿಕೊಂಡಿದ್ದಾರೆ.
ಇನ್ನು ಆರು ವಿದ್ಯಾರ್ಥಿಗಳು ಇನ್ನು ಉಕ್ರೇನ್ ನಲ್ಲಿ ಇದ್ದು, ಅವರನ್ನು ಆಪರೇಷನ್ ಗಂಗಾ ಮೂಲಕ ಮೈಸೂರಿಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.