26 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಕರಣದ ವಿಚಾರಣೆ ವೇಳೆ 26 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮಹಿಳೆಗೆ ಮಗುವನ್ನು ಹೊಂದುವುದು ಅಥವಾ ಅದರಿಂದ ದೂರವಿರುವುದು ಸಂಪೂರ್ಣವಾಗಿ ತನ್ನ ನಿರ್ಧಾರವಾಗಿದೆ ಎಂದು ಹೇಳಿದೆ. ಮಹಿಳೆ ತಾನು ಗರ್ಭ ಧರಿಸಬೇಕೇ ಬೇಡವೇ ಎಂಬುದು ಆಕೆಯ ನಿರ್ಧಾರಕ್ಕೆ ಬಿಟ್ಟಿದ್ದು. ಇದರಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್​ ಹೇಳಿದೆ.

ಅವಿವಾಹಿತ ಯುವತಿ ತನ್ನ ಸ್ನೇಹಿತನಿಂದ ಗರ್ಭ ಧರಿಸಿದ್ದು, ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ವೇಳೆ ಕೋರ್ಟ್​ ಈ ತೀರ್ಪು ನೀಡಿದೆ.

ಅವಿವಾಹಿತೆಯಾಗಿರುವ ಎಂಬಿಎ ವಿದ್ಯಾರ್ಥಿನಿ ತನ್ನ ಸ್ನೇಹಿತನ ಸಖ್ಯದಿಂದ ಗರ್ಭ ಧರಿಸಿದ್ದು, 26 ವಾರಗಳ ಗರ್ಭಿಣಿಯಾಗಿದ್ದಾರೆ. ಅಚ್ಚರಿ ಅಂದ್ರೆ ತಾನು ಗರ್ಭಿಣಿಯಾಗಿದ್ದೇನೆ ಎಂಬುದು ಯುವತಿಗೆ ಕಳೆದ ತಿಂಗಳಷ್ಟೇ ಗೊತ್ತಾಗಿತ್ತು. ಹೀಗಾಗಿ ಯುವತಿ ತನಗೆ ಈಗಲೇ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲ. ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಳು.

ವಿಚಾರಣೆ ನಡೆಸಿದ ಕೋರ್ಟ್​ ಹೆಣ್ಣು ಜನ್ಮ ನೀಡುವ, ತಿರಸ್ಕರಿಸುವ ಸಂಪೂರ್ಣ ಹಕ್ಕು ಹೊಂದಿದ್ದಾಳೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಷ್ಟವಿಲ್ಲದ ಗರ್ಭ ಧರಿಸಿದರೆ ಆಕೆ ಮಾನಸಿಕವಾಗಿ ಕುಗ್ಗುತ್ತಾಳೆ. ಹೀಗಾಗಿ ಆಕೆಯ ಆಯ್ಕೆಗೆ ಅವಕಾಶವಿದೆ ಎಂದು ಹೇಳಿದೆ.

ವೈದ್ಯರಿಂದ ವಿರೋಧ
ಯುವತಿಗೆ ಈಗಾಗಲೇ ಗರ್ಭಪಾತ ಮಾಡಿಸಿಕೊಳ್ಳುವ ಅವಧಿ ಮುಗಿದಿದೆ. ಒಂದು ವೇಳೆ ಆಕೆಗೆ ಅಬಾರ್ಷನ್​ ಮಾಡಿದಲ್ಲಿ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ ಎಂದು ವೈದ್ಯ ಮಂಡಳಿ ಕೋರ್ಟ್​ಗೆ ವರದಿ ನೀಡಿತ್ತು. ನ್ಯಾಯಾಲಯ ಕೂಡ ಈ ಬಗ್ಗೆ ಮಾಹಿತಿ ಕೇಳಿತ್ತು.

ಆದರೆ, ಮಹಿಳೆಯ ಹಕ್ಕನ್ನು ಎತ್ತಿ ಹಿಡಿದಿರುವ ಕೋರ್ಟ್​, ಆಕೆಯ ಇಚ್ಚಾನುಸಾರವಾಗಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಪಾತ ಮಾಡಬೇಕು. ಈ ಅವಧಿಯಲ್ಲಿ ಮಗು ಜೀವಂತವಾಗಿದ್ದರೆ, ಅದನ್ನು ಉಳಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಕೋರ್ಟ್​ ವೈದ್ಯರಿಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!