Wednesday, November 30, 2022

Latest Posts

ಅರ್ಜಿ ಹಾಕದವರಿಗೂ ಶಿಕ್ಷಕ ಭಾಗ್ಯ ನೀಡಿ ಶಿಕ್ಷಣ ವ್ಯವಸ್ಥೆಯನ್ನೇ ಕುಲಗೆಡಿಸಿದ್ದ ಸಿದ್ದರಾಮಯ್ಯ: ಬಿಜೆಪಿ ವಾಗ್ಧಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅರ್ಜಿ ಹಾಕದವರಿಗೂ ಶಿಕ್ಷಕ ಭಾಗ್ಯ ನೀಡಿ ಶಿಕ್ಷಣ ವ್ಯವಸ್ಥೆಯನ್ನೇ ಶಿಕ್ಷಣ ವಿರೋಧಿ ಸಿದ್ದರಾಮಯ್ಯ ಕುಲಗೆಡಿಸಿದ್ದರು ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಮಕ್ಕಳ ದಾಖಲಾತಿಗಿಂತಲೂ ಹೆಚ್ಚು ಸಮವಸ್ತ್ರ ನೀಡಿ 13 ಕೋಟಿ ಅಕ್ರಮ ಮಾಡಿದ್ದು ಮರೆತು ಹೋಯಿತೇ?

ಮಕ್ಕಳ ಮುಗ್ಧತೆ ಬಗ್ಗೆ ಸಿದ್ದರಾಮಯ್ಯ ಮಾತನಾಡುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಮಕ್ಕಳ ಶಿಕ್ಷಣ ವಿಚಾರದಲ್ಲಿ ಸಿದ್ದರಾಮಯ್ಯ ಮಾಡಿದ ರಾಜಕೀಯ ಒಂದೆರಡಲ್ಲ. ಮೊಟ್ಟೆ ಭಾಗ್ಯದ ಮೂಲಕ ಮಕ್ಕಳಲ್ಲಿ ವಿಷ ಬೀಜ ಬಿತ್ತಿದರು. ಮೊಟ್ಟೆ ವಿತರಣೆಯಲ್ಲೂ ಕೋಟಿ ಕೋಟಿ ಹಗರಣ ನಡೆಸಿದ್ದಾರೆ. ಸಿದ್ದರಾಮಯ್ಯನವರೇ, ಕಲ್ಲಡ್ಕ ಶಾಲಾ ಮಕ್ಕಳ ಅನ್ನ ಕಿತ್ತುಕೊಂಡು ದ್ವೇಷದ ರಾಜಕಾರಣ ಮಾಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ ಎಂದು ಟ್ವೀಟ್ ಮೂಲಕ ಬಿಜೆಪಿ ವಾಗ್ಧಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!