Friday, June 9, 2023

Latest Posts

ಭಾರತೀಯ ನೌಕಾಪಡೆಗೆ ಸೇರೋಕೆ ಸಿದ್ಧವಾಯ್ತು ಅಗ್ನಿವೀರ್ ಮೊದಲ ಬ್ಯಾಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಒಡಿಶಾದ ಐಎನ್‌ಎಸ್‌ ಚಿಲಿಕಾದಲ್ಲಿ ಅಗ್ನಿವೀರ್‌ಗಳ ಮೊದಲ ಬ್ಯಾಚ್ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿದೆ. ಒಡಿಶಾದ ಚಿಲಿಕಾದಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ 273 ಮಹಿಳೆಯರೂ ಸೇರಿದಂತೆ 2,600 ನೌಕಾ ಅಗ್ನಿವೀರರ ಮೊದಲ ತಂಡ ಭಾಗವಹಿಸಿದ್ದರು.

ನಿನ್ನೆ ಸಂಜೆ ಐಎನ್‌ಎಸ್ ಚಿಲಿಕಾದಲ್ಲಿ ಸತತ 16 ವಾರಗಳ ಕಠಿಣ ತರಬೇತಿ ಪೂರ್ಣಗೊಳಿಸಿದ ಯುವ ಅಗ್ನಿವೀರ್‌ಗಳಿಗೆ ಆಕರ್ಷಕವಾದ ಕಿರೀಟವನ್ನು ತೊಡಿಸಲಾಯಿತು. ತದನಂತರ ಅಗ್ನಿವೀರರು ನೌಕಾಪಡೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಪಾಸಿಂಗ್ ಔಟ್ ಪರೇಡ್‌ನಲ್ಲಿ ಪಾಲ್ಗೊಂಡಿದ್ದರು.

ಪಾಸಿಂಗ್ ಔಟ್ ಪರೇಡ್‌ನಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಖ್ಯಾತ ಅಥ್ಲೀಟ್ ಮತ್ತು ಪ್ರಸ್ತುತ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ ಟಿ ಉಷಾ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ರಕ್ಷಣಾ ಸಿಬ್ಬಂದಿ, ವಿಶೇಷ ಆಹ್ವಾನಿತರು ಮತ್ತು ಅಗ್ನಿವೀರರ ಪೋಷಕರು ಉಪಸ್ಥಿತರಿದ್ದರು.

ಪಾಸಿಂಗ್‌ ಔಟ್‌ ಪರೇಡ್‌ ಅನ್ನು ಸಾಮಾನ್ಯವಾಗಿ ಹಗಲು ಹೊತ್ತಲ್ಲಿ ನಡೆಸಲಾಗುತ್ತದೆ. ಆದರೆ ಈ ಬಾರಿ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಾರ್ಚ್‌ 28ರಂದು ಸೂರ್ಯಾಸ್ತದ ಬಳಿಕ ಪರೇಡ್‌ ನಡೆದಿರುವುದು ವಿಶೇಷ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!