ಕೇರಳದಲ್ಲಿ ಫುಟ್ಬಾಲ್ ಮೇನಿಯಾ: ನದಿಯಲ್ಲಿ  ಮೆಸ್ಸಿ-ನೇಮಾರ್‌ ಬೃಹತ್‌ ಕಟೌಟ್‌ ನಿಲ್ಲಿಸಿ ಅಭಿಮಾನಿಗಳ ವಾರ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕತಾರ್‌ನಲ್ಲಿ ವಿಶ್ವಕಪ್ ಆರಂಭವಾಗಲು ಕೇವಲ ಹದಿನೈದು ದಿನಗಳಷ್ಟೇ ಬಾಕಿ ಉಳಿದಿವೆ, ಆದರೆ ಈಗಾಗಲೇ ಕೇರಳದಲ್ಲಿ ಫುಟ್‌ಬಾಲ್ ಜ್ವರ ಆವರಿಸಿದೆ. ವಿವಿಧ ತಂಡಗಳ ಫ್ಯಾನ್ಸ್‌ ನಡುವೆ ವಾರ್‌ ಪ್ರಾರಂಭವಾಗಿದೆ. ಚತ್ತಾರಿಮಂಗಲದ ಅರ್ಜೆಂಟೀನಾ ಅಭಿಮಾನಿಗಳು ಪುಲ್ಲವೂರ್‌ನ ಕುರುಂಗಟ್ಟು ಕಡವು ನದಿಯಲ್ಲಿ ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ 30 ಅಡಿ ಎತ್ತರದ ಭವ್ಯ ಕಟೌಟ್ ನಿರ್ಮಿಸಿದ್ದಾರೆ.‌ ಈ ಸವಾಲನ್ನು ಸ್ವೀಕರಿರುವ ಬ್ರೆಜಿಲ್‌ ಅಭಿಮಾನಿಗಳು ಅದೇ ನದಿಯ ಬದಿಯಲ್ಲಿ ನೇಮಾರ್ ಅವರ 40 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನ ಸಮರ ಸಾರಿದ್ದಾರೆ.
ಅರ್ಜೆಂಟೀನಾ ಅಭಿಮಾನಿಗಳ ಸಂಘದ ಸದಸ್ಯ ನೌಶೀರ್ ನೆಲ್ಲಿಕೋಡು ಅವರು 2021 ರ ಕೋಪಾ ಅಮೇರಿಕಾ ಫೈನಲ್ ಕತಾರ್‌ನಲ್ಲಿ ಪುನರಾವರ್ತನೆಯಾಗಬೇಕೆಂದು ಬಯಸುತ್ತಾರೆ. “ಆಗ ನಾವು( ಅರ್ಜೆಂಟೀನಾ) ಬ್ರೆಜಿಲ್ ಅನ್ನು ಏಕೈಕ ಗೋಲಿನಿಂದ ಸೋಲಿಸಿದ್ದೇವೆ. ಇದು ಮತ್ತೆ ಸಂಭವಿಸುವುದನ್ನು ನಾವು ನೋಡಲು ಬಯಸುತ್ತೇವೆʼ ಎನ್ನುತ್ತಾರೆ. ಈ ಬಗ್ಗೆ ಬ್ರೆಜಿಲ್ ಅಭಿಮಾನಿಗಳು ಸುಮ್ಮನಿಲ್ಲ. “ಅರ್ಜೆಂಟೀನಾ ನಮ್ಮನ್ನು ಬೆದರಿಸಲು ಸಾಧ್ಯವೇ ಇಲ್ಲ. ನಾವು ಮೆಸ್ಸಿ ಆಕೃತಿಯನ್ನು ನೋಡಿದ ಮೇಲೆ ನೇಮರ್ ಅವರ ಕಟೌಟ್ ಅನ್ನು ಸ್ಥಾಪಿಸಿದ್ದೇವೆ. ಅರ್ಜೆಂಟೀನಾದ ವಿರುದ್ಧ ಬ್ರೆಜಿಲ್ ವಿಶ್ವಕಪ್ ಫೈನಲ್ ಗೆದ್ದು ಸಾಂಬಾ ವಿಜಯೋತ್ಸವ ಆಚರಿಸುವುದನ್ನು ನೋಡುವುದು ನಮ್ಮ ಕನಸು ಎನ್ನುತ್ತಾರೆ ಬ್ರೆಜಿಲ್ ಅಭಿಮಾನಿಗಳ ಸಂಘದ ಸದಸ್ಯ ಅಕ್ಬರ್ ಕೆ.ಪಿ.
ಮಲಪ್ಪುರಂನ ಪಲಕ್ಕುಳಂ ಫುಟ್‌ಬಾಲ್ ಕ್ಲಬ್ ಆ ಪ್ರದೇಶದಲ್ಲಿನ ಕಟ್ಟಡಗಳ ಮೇಲೆ ತಮ್ಮ ನೆಚ್ಚಿನ ತಂಡಗಳ ರಾಷ್ಟ್ರಧ್ವಜಗಳನ್ನು ಚಿತ್ರಿಸುವ ಮೂಲಕ ವಿಶ್ವಕಪ್ ಅನ್ನು ಆಚರಿಸುತ್ತಿದೆ. “ನಾವು ಈ ಪ್ರದೇಶದಲ್ಲಿನ ಕಟ್ಟಡಗಳನ್ನು ಅರ್ಜೆಂಟೀನಾ, ಬ್ರೆಜಿಲ್, ಇಂಗ್ಲೆಂಡ್ ಮತ್ತು ಪೋರ್ಚುಗಲ್‌ನ ರಾಷ್ಟ್ರೀಯ ಬಣ್ಣಗಳಲ್ಲಿ ಚಿತ್ರಿಸಿದ್ದೇವೆ. ನೇಮಾರ್, ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ನಮ್ಮ ನೆಚ್ಚಿನ ಆಟಗಾರರ ಕಟೌಟ್‌ಗಳನ್ನು ನಾವು ಶೀಘ್ರದಲ್ಲೇ ನಿರ್ಮಿಸುತ್ತೇವೆ ಎಂದು ಕ್ಲಬ್ ಸದಸ್ಯ ಮತ್ತು ಬ್ರೆಜಿಲ್ ಅಭಿಮಾನಿ ಅಲಿ ಅಕ್ಬರ್ ಮಡಾಯಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!