ತುಳಸಿ ಪೂಜೆ ಮಾಡೋದು ಯಾಕೆ? ವಿಧಿ ವಿಧಾನಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಹೆಚ್ಚಿನ ಮಹತ್ವ ಇದೆ. ತುಳಸಿ ಲಕ್ಷ್ಮಿ ದೇವಿಯ ಸ್ವರೂಪ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಭಗವಾನ್ ವಿಷ್ಣು ನಾಲ್ಕು ತಿಂಗಳ ದೀರ್ಘ ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ.

ದ್ವಾದಶಿ ತಿಥಿಯಂದು ಭಗವಾನ್ ವಿಷ್ಣುವಿನ ರೂಪವಾದ ಸಾಲಿಗ್ರಾಮದ ಜೊತೆ ತುಳಸಿ ವಿವಾಹ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ಸಾಲಿಗ್ರಾಮದ ವಿವಾಹ ಮಾಡಿಸುವ ಭಕ್ತರಿಗೆ ಕಳೆದ ಜನ್ಮದ ಪಾಪ ತೊಳೆದುಹೋಗುತ್ತದೆ ಎನ್ನುವ ನಂಬಿಕೆ ಇದೆ.

ತುಳಸಿ ಮದುವೆ ದಿನ ಉಪವಾಸ ಮಾಡಿ, ಮದುವೆ ಮಾಡಿಸಿ ಮರುದಿನ ಗಿಡವನ್ನು ಬ್ರಾಹ್ಮಣರಿಗೆ ದಾನ ಮಾಡಲಾಗುತ್ತದೆ. ತುಳಸಿ ಮದುವೆ ಮಾಡಿಸುವವರ ದಾಂಪತ್ಯವೂ ಸುಖಕರವಾಗಿರುತ್ತದೆ ಎನ್ನುವ ನಂಬಿಕೆ ಇದೆ.

ಪೂಜಾ ವಿಧಾನ
ಸ್ನಾನದ ನಂತರ ಶುದ್ಧವಾದ ವಸ್ತ್ರ ಧರಿಸಬೇಕು, ಕಪ್ಪು ಬಣ್ಣದ ಬಟ್ಟೆ ಧರಿಸುವಂತಿಲ್ಲ. ತುಳಸಿ ವಿವಾಹ ನೆರವೇರಿಸುವವರು ಉಪವಾಸ ಮಾಡಬೇಕು. ಅಂಗಳದಲ್ಲಿ ತುಳಸಿ ಗಿಡ ಇರಿಸಿ ಪೂಜಿಸಬೇಕು. ತುಳಸಿ ಗಿಡದ ಕುಂಡಲ್ಲಿ ಕಬ್ಬು ನೆಟ್ಟು ಕೆಂಪು ವಸ್ತ್ರದಿಂದ ಮಂಟಪ ಮಾಡಬೇಕು. ಗಿಡದ ಬದಿಗೆ ತಟ್ಟೆಯಿಟ್ಟು ಅದರೊಳಗೆ ಸಾಲಿಗ್ರಾಮ ಕಲ್ಲು ಇಡಬೇಕು. ನಂತರ ಹಾಲಿನಲ್ಲಿ ನೆನೆಸಿದ ಅರಿಶಿಣ ಹಚ್ಚಿ, ಕುಂಕುಮ ಹಚ್ಚಬೇಕು. ಪೂಜೆಗೆ ನೆಲ್ಲಿಕಾಯಿ, ಸೇಬು ಇಡಬಹುದು.
ತಟ್ಟೆಯ ತುಂಬ ಕರ್ಪೂರ ಹಾಕಿ ದೇವರಿಗೆ ಆರತಿ ಮಾಡಿ, ನಂತರ 11 ಬಾರಿ ಪ್ರದಕ್ಷಿಣೆ ಹಾಕಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!