Saturday, December 2, 2023

Latest Posts

ದಿನಭವಿಷ್ಯ | ನಿಮ್ಮ ಸಹನೆ ಪರೀಕ್ಷಿಸುವ ಬೆಳವಣಿಗೆ ಸಂಭವಿಸುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಯಲ್ಲಿ ಹೆಚ್ಚಿನ ಹೊಣೆ. ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲಿರಿ. ಸಂಗಾತಿ ಜತೆಗೆ ಭಿನ್ನಮತ ಸಂಭವ. ಸಂಯಮ ಅವಶ್ಯ.

ವೃಷಭ
ಇಂದಿನದು ಕಷ್ಟಕರ ದಿನ. ಹಲವಾರು ವಿಷಯಗಳನ್ನು  ಇತ್ಯರ್ಥ ಮಾಡ ಬೇಕಾಗುವುದು. ಕೆಲಸದ ಒತ್ತಡವನ್ನು ಮನೆಗೆ ತರಬೇಡಿ.

ಮಿಥುನ
ಸಂವಹನದ ಕೊರತೆ ಯಿಂದ ಬಂಧುಗಳ ಜತೆ ಉದ್ವಿಗ್ನ ಸ್ಥಿತಿ. ಗೊಂದಲದ ಮನಸ್ಥಿತಿ. ಇದರಿಂದ ಹೊರಬರಲು ಏಕಾಂಗಿತನ ದಾರಿಯಲ್ಲ, ತಿಳಿಯಿರಿ.

ಕಟಕ
ಉತ್ಸಾಹಪೂರ್ಣ ದಿನ. ಪರಮಾಪ್ತರ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಅವರಿಂದ ಸೂಕ್ತ ಸ್ಪಂದನೆ ದೊರಕುವುದು. ಮಾನಸಿಕ ನೆಮ್ಮದಿ. ವೃತ್ತಿ ಸಂಕಷ್ಟ ನಿವಾರಣೆ.

ಸಿಂಹ
ಇಂದು ನಿಮ್ಮ ಕೌಟುಂಬಿಕ ವಿಷಯ ಆದ್ಯತೆ ಪಡೆಯುತ್ತದೆ. ಕಾಲಮಿತಿಯಲ್ಲಿ ಕೆಲವು ರಗಳೆಗಳನ್ನು ಇತ್ಯರ್ಥ ಪಡಿಸಬೇಕು. ದೀರ್ಘ ಎಳೆಯಬೇಡಿ.

ಕನ್ಯಾ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ನೇರ ಹಾಗೂ ದಿಟ್ಟ ನಡೆ ಅನುಸರಿಸುವುದು ನಿಮಗೆ ಒಳಿತು ತರುವುದು. ಮೀನಮೇಷ ಬೇಡ.

ತುಲಾ
ವೃತ್ತಿಯಲ್ಲಿ ಅದೃಷ್ಟ. ನಿಮ್ಮ ಪ್ರಾಮಾಣಿಕ ದುಡಿಮೆ ಮೆಚ್ಚುಗೆ ಪಡೆಯುವುದು. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕೌಟುಂಬಿಕ ನೆಮ್ಮದಿ.

ವೃಶ್ಚಿಕ
ನಿಮ್ಮ ಸಹನೆ ಪರೀಕ್ಷಿಸುವ ಬೆಳವಣಿಗೆ ಸಂಭವಿಸುವುದು. ಕೆಲವು ವಿಚಾರ ಮನಶ್ಯಾಂತಿ ಕಲಕುವುದು. ಆರೋಗ್ಯಕರ ಆಹಾರ ಸೇವಿಸಿ.

ಧನು
ಖರ್ಚು ತಗ್ಗಿಸಿ  ಉಳಿತಾಯ ಹೆಚ್ಚಿಸಲು ಮನ ಮಾಡುವಿರಿ. ಆದರೆ ಅನಿರೀಕ್ಷಿತ ಬೆಳವಣಿಗೆ ನಿಮ್ಮ ಖರ್ಚು ಹೆಚ್ಚಿಸುವುದು. ಕೌಟುಂಬಿಕ ಕಿರಿಕಿರಿ.

ಮಕರ
ಇಂದಿನ ಎಲ್ಲಾ ಕೆಲಸವನ್ನು  ಸಮರ್ಥವಾಗಿ ಮುಗಿಸುವಿರಿ. ಖಾಸಗಿ ಬದುಕಿನಲ್ಲಿ ಸಂತೋಷಕರ ಬೆಳವಣಿಗೆ. ಬಂಧು ಗಳಿಂದ ಶುಭಸುದ್ದಿ.

ಕುಂಭ
ವೃತ್ತಿಯಲ್ಲಿ ಅದೃಷ್ಟ ಖುಲಾಯಿಸಲಿದೆ. ನಿಮ್ಮ ಆಕಾಂಕ್ಷೆ ಈಡೇರುವುದು. ಇತರರ ಬಗ್ಗೆ ವೃಥಾ ಟೀಕೆ ಮಾಡದಿರಿ. ಅವರು ನಿಮಗೆ ತಿರುಗಿ ಬೀಳಬಹುದು.

ಮೀನ
ನಿಮ್ಮ ಕಠಿಣ ದುಡಿಮೆಗೆ ಸೂಕ್ತ ಫಲ ದೊರಕುವುದು. ದೊಡ್ಡ ಖರ್ಚು ನಿಭಾಯಿಸಲು ಸ್ವಲ್ಪ ಕಷ್ಟ ಪಡುವಿರಿ. ಆರ್ಥಿಕ ಹಿಂಜರಿತ ಕಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!