Wednesday, December 6, 2023

Latest Posts

ಜಾಕೀರ್ ಉಪನ್ಯಾಸಕ್ಕೆ ಆಹ್ವಾನ: ಫಿಫಾ ವಿಶ್ವಕಪ್ ಬ್ಯಾನ್ ಮಾಡಲು ಗೋವಾ ಸರ್ಕಾರಕ್ಕೆ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್‌ನಲ್ಲಿ ಇಸ್ಲಾಂ ಕುರಿತು ಉಪನ್ಯಾಸ ನೀಡುವಂತೆ ಇಸ್ಲಾಂ ವಿವಾದಾತ್ಮಕ ಮತ ಪ್ರಚಾರಕ ಜಾಕೀರ್ ನಾಯ್ಕ್‌ನನ್ನು ಕತಾರ್ ಆಹ್ವಾನಿಸಿದ ಹಿನ್ನಲೆ ಫಿಫಾ ವಿಶ್ವಕಪ್ ಅನ್ನು ಬಹಿಷ್ಕಾರ ಮಾಡುವಂತೆ ಬಿಜೆಪಿ ವಕ್ತಾರ ಸವಿಯೊ ರಾಡ್ರಿಗಸ್ ಗೋವಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಭಾರತದಿಂದ ಪರಾರಿಯಾಗಿರುವ ಜಾಕೀರ್ ನಾಯ್ಕ್‌ನನ್ನು ಫಿಫಾ ವಿಶ್ವಕಪ್‌ನಲ್ಲಿ ಇಸ್ಲಾಂ ಕುರಿತು ಉಪನ್ಯಾಸ ನೀಡಲು ಕತಾರ್ ಆಹ್ವಾನಿಸಿದೆ. ಜಗತ್ತೇ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಜಾಕೀರ್‌ಗೆ ವೇದಿಕೆ ನೀಡುವುದು, ದ್ವೇಷವನ್ನು ಹರಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ, ಭಯೋತ್ಪಾದಕ ಸಹಾನುಭೂತಿಯನ್ನು ನೀಡಿದಂತಾಗುತ್ತದೆ. ಹೀಗಾಗಿ ಫಿಫಾ ವಿಶ್ವಕಪ್‌ಗೆ ಬಹಿಷ್ಕಾರ ಹಾಕುವಂತೆ ರಾಡ್ರಿಗಸ್ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!