16ರ ಬಾಲಕನ ಜೊತೆ 28ರ ಮ್ಯಾರೀಡ್‌ ವುಮೆನ್‌ ಲವ್ವು! ಹತ್ತನೇ ಕ್ಲಾಸ್‌ ಹುಡುಗನ ಜೊತೆ ಎಸ್ಕೇಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಂಡ, ಮನೆ, ಮಗು, ಮುದ್ದಾದ ಸಂಸಾರ.. ಈ ಎಲ್ಲವನ್ನೂ ಬಿಟ್ಟು ಮಹಿಳೆಯೊಬ್ಬರು ಹತ್ತನೇ ಕ್ಲಾಸ್‌ ಹುಡುಗನ ಜೊತೆ ಓಡಿಹೋಗಿದ್ದಾರೆ.

ವಿಜಯಪುರ ಜಿಲ್ಲೆಯ ಪಟ್ಟಣವೊಂದರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16ರ ಅಪ್ರಾಪ್ತ ಬಾಲಕನ ಜೊತೆ ಮಹಿಳೆಗೆ ಪ್ರೀತಿಯಾಗಿದ್ದು, ಇಬ್ಬರೂ ಮನೆ ಬಿಟ್ಟು ಓಡಿಹೋಗಿದ್ದಾರೆ. ಇತ್ತ ಹುಡುಗನ ಮನೆಯವರು ಭಯದಲ್ಲಿದ್ದು, ಹತ್ತನೇ ಕ್ಲಾಸ್‌ ಮಗನ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಹಿಳೆಗೆ 4 ವರ್ಷದ ಮಗುವಿದ್ದು, ಮಗುವನ್ನು ಕೂಡ ಬಿಟ್ಟು ಹೋಗಿದ್ದಾಳೆ. ಇತ್ತ ಅಪ್ರಾಪ್ತ ಬಾಲಕನ ತಾಯಿ ವಿವಾಹಿತ ಮಹಿಳೆ ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾಳೆ.

ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಇಬ್ಬರ ಮಧ್ಯೆ ಲವ್ ಆಗಿದೆ. ಮಗನನ್ನು ಪುಸಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾಳೆ ಅಂತ ಬಾಲಕನ ತಾಯಿ ಆರೋಪಿಸಿದ್ದಾರೆ. ಈ ಹಿಂದೆ ಕೂಡ ಮಹಿಳೆಗಾಗಿ ಬಾಲಕ ವಿಷ ಸೇವಿಸಿದ್ದನು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!