ಬಿಎಂಟಿಸಿ ಬಸ್ ಚಾಲಕರಿಗೆ ಬಿಗ್ ಶಾಕ್: 50 ಎಲೆಕ್ಟ್ರಿಕ್ ಬಸ್​ ಚಾಲಕರಿಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಯುವಕರನ್ನು ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಚಾಲಕರನ್ನಾಗಿ ನೇಮಿಸಿದ ಆಕ್ರೋಶದ ಹಿನ್ನೆಲೆಯಲ್ಲಿ ಬಿಎಂಟಿಸಿ 50 ಚಾಲಕರನ್ನು ವಜಾ ಮಾಡಿದೆ.

ಬಿಎಂಟಿಸಿ ಇ-ಬಸ್‌ಗಳಲ್ಲಿ ಕೇರಳದ ಮಲಯಾಳಿ ಯುವಕರು ಮತ್ತು ಕನ್ನಡ ಬಾರದ ಅನನುಭವಿ ಯುವಕರನ್ನು ಚಾಲಕರನ್ನಾಗಿ ನಿಯೋಜಿಸಲಾಗಿದೆ. ಖಾಸಗಿ ಸಂಸ್ಥೆಯೊಂದರ ಈ ಕ್ರಮಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ವಿರೋಧ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು. ರಾಜಧಾನಿ ಬೆಂಗಳೂರಿನ ಸಾರಿಗೆ ಜೀವನಾಡಿಯಾಗಿರುವ ಬಿಎಂಟಿಸಿ ಬಸ್‌ಗಳಲ್ಲಿ ಕನ್ನಡಿಗರಿಗೆ ಚಾಲಕರ ಹುದ್ದೆ ನೀಡಬೇಕು ಎಂಬ ಬೇಡಿಕೆಗಳು ಕೇಳಿ ಬಂದಿವೆ.

ಈ ಬೆಳವಣಿಗೆಯಿಂದಾಗಿ ಬಿಎಂಟಿಸಿ ಅಧಿಕಾರಿಗಳು 50 ಇ-ಬಸ್ ಚಾಲಕರಿಗೆ ಪರವಾನಗಿ ನೀಡಿದ್ದಾರೆ. ಕೇರಳದ 20 ಕ್ಕೂ ಹೆಚ್ಚು ಚಾಲಕರು ಮತ್ತು 30 ಕ್ಕೂ ಹೆಚ್ಚು ಭಾರೀ ಚಾಲನಾ ಪರವಾನಗಿ ಹೊಂದಿರುವ ಅನನುಭವಿ ಚಾಲಕರನ್ನು ಪತ್ತೆ ಮಾಡಿ ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!