ಮಿಡ್ ಡೇ ಮಿಲ್ಕ್ ಪೌಡರ್ ಮೇಲೂ ಕಾಳಧನಿಕರ ಕಣ್ಣು: ಪೊಲೀಸರಿಂದ ಮೂವರ ಬಂಧನ

ಹೊಸದಿಗಂತ ವರದಿ ಕಲಬುರಗಿ:

ಮಕ್ಕಳ ಹೊಟ್ಟೆಗೆ ಸೇರಬೇಕಾಗಿರುವ ಹಾಲಿನ ಪೌಡರ್ ಕಾಳ ಸಂತೆಯಲ್ಲಿ ಮಾರಾಟಕ್ಕೆ ಸಾಗಿಸುತ್ತಿದ್ದ ವಾಹನದ ಮೇಲೆ ಪೋಲಿಸರು ದಾಳಿ ನಡೆಸಿದ್ದಾರೆ. ಕಲಬುರಗಿ ನಗರದ ಉಪಳಾಂವ ಕ್ರಾಸ್ ಬಳಿ ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ಒಂದು ಕೆಜಿ, ಹಾಗೂ ಅರ್ಧ ಕೆಜಿ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ. ಸಬ್ ಅರ್ಬನ್ ಪೋಲಿಸ್ ಇನ್ಸ್ಪೆಕ್ಟರ್ ರಮೇಶ್ ಕಾಂಬಳೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು,‌ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮಿಡ್ ಡೇ ಮಿಲ್ಕ್ ಪೌಡರ್ ಹಾಲಿನ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾಗಾಟ ಮಾಡುತ್ತಿದ್ದ ಅನಿಲ್, ಇಮ್ರಾನೋದ್ದಿನ, ಮೈನೊದ್ದಿನ ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಅಬ೯ನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!