ಎನ್‌ಐಎಯಿಂದ ಮೂವರು ಶಂಕಿತ ಉಗ್ರರ ಬಂಧನ: ಹ್ಯಾಂಡ್‌ ಗ್ರನೇಡ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ಕಾನೂನುಬಾಹಿರ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಹೈದರಾಬಾದ್‌ನಲ್ಲಿ ಸ್ಪೋಟ ನಡೆಸಲು ರೂಪಿಸಿದ ಸಂಚನ್ನು ಎನ್‌ಐಎ ಕಂಡುಹಿಡಿದಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್​ ಜಾಹೀದ್​ ಸೇರಿದಂತೆ ಮೂವರು ಉಗ್ರರರನ್ನು ಹೈದರಾಬಾದ್​ನಲ್ಲಿ ಬಂಧಿಸಲಾಗಿದೆ. ಜೊತೆಗೆ ಹ್ಯಾಂಡ್‌ ಗ್ರನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿ ಮತ್ತು ಸ್ಫೋಟಗಳನ್ನು ನಡೆಸಲು ಅವರಿಗೆ ಹ್ಯಾಂಡ್‌ ಗ್ರನೇಡ್‌ಗಳಮು ಸರಬರಾಜು ಮಾಡಿತ್ತು ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ. ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳಲ್ಲಿ ಕೋಮು ಉದ್ವಿಗ್ನತೆ ಉಂಟುಮಾಡುವ ಅವಕಾಶಗಳಿರುವುದರಿಂದ ಜನವರಿ 25 ರಂದು ಮೂವರು ಹೈದರಾಬಾದ್ ನಿವಾಸಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳು ಹೈದರಾಬಾದ್‌ನಲ್ಲಿ ಹಲವಾರು ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಬ್ದುಲ್ ಜಾಹೇದ್ ಅಲಿಯಾಸ್ ಜಾಹೆದ್ ಅಲಿಯಾಸ್ ಮೊಹಮ್ಮದ್‌ಗೆ ಟಾಸ್ಕ್ ನೀಡಿದ್ದರು, ಎಫ್‌ಐಆರ್‌ನಲ್ಲಿ ಜಾಹೇದ್ ಹಲವಾರು ಯುವಕರನ್ನು ಅಂದರೆ ಮಾಜ್, ಸಮಿಯುದ್ದೀನ್ ಮತ್ತು ಇತರರನ್ನು ನಿರ್ದೇಶನದ ಮೇರೆಗೆ ನೇಮಕ ಮಾಡಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.

ಜಾಹೇದ್ ತನ್ನ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ, ತನ್ನ ಗ್ಯಾಂಗ್ ಸದಸ್ಯರೊಂದಿಗೆ ಹೈದರಾಬಾದ್ ನಗರದಲ್ಲಿ ಸ್ಫೋಟಗಳು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!