ಬರೋಬ್ಬರಿ 29,000 ಕೋಟಿ ರಕ್ಷಣಾ ಸಾಮಗ್ರಿ ಖರೀದಿಗೆ ಕೇಂದ್ರ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಕ್ಷಣಾ ಸಾಮಗ್ರಿಗಳಲ್ಲಿಯೂ ಆತ್ಮನಿರ್ಭರತೆ ಸಾಧಿಸುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಈಗ 29,000 ಕೋಟಿ ರೂ.ಗಳ ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಅನುಮತಿ ನೀಡಿದೆ.

ಅದರಂತೆ, ದೇಶದಲ್ಲಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲಾದ ಸಶಸ್ತ್ರ ಡ್ರೋನ್ ಸಮೂಹಗಳು, ಕಾರ್ಬೈನ್‌ಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳು ಸೇರಿದಂತೆ ಒಟ್ಟು 28,732ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

2020ರ ಮೇಯಿಂದ ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಸೇರಿ ಭಾರತದ ಗಡಿಯಲ್ಲಿ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಮೂಡಿದೆ. ಹೀಗಾಗಿ ಎಲ್‌ಎಸಿಯಲ್ಲಿ ನಿಯೋಜನೆಗೊಂಡಿರುವ ಮುಂಚೂಣಿ ಸೈನಿಕರಿಗಾಗಿ ಕ್ಲೋಸ್ ಕ್ವಾರ್ಟರ್ ಕಾರ್ಬೈನ್‌ಗಳನ್ನು ಖರೀದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾರತದ ಪ್ರಮುಖ ಮಂಡಳಿಯಾದ ಶಸ್ತ್ರಾಸ್ತ್ರ ಖರೀದಿ ರಕ್ಷಣಾ ಸ್ವಾಧೀನ ಸಮಿತಿ (ಡಿಎಸಿ) ಪ್ರಮುಖ ರಕ್ಷಣಾ ಸಾಮಗ್ರಿ ಖರೀದಿ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!