ವೇದಾಂತ ಕಂಪನಿಯ ತಾಮ್ರಘಟಕ ಮುಚ್ಚಿರುವುದರಿಂದ ಆರ್ಥಿಕತೆಗಾದ ನಷ್ಟವೆಷ್ಟು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮಿಳುನಾಡಿನ ತೂತುಕುಡಿಯಲ್ಲಿನ ವೇದಾಂತ ಕಂಪನಿಯ ತಾಮ್ರ ಕರಗಿಸುವ ಘಟಕವನ್ನು ಮುಚ್ಚಿರುವುದರಿಂದ ಆರ್ಥಿಕತೆಗೆ ಸಾವಿರಾರು ಕೋಟಿ ರೂ.ಗಳ ನಷ್ಟವಾಗಿದೆ.

ವರದಿಯೊಂದರ ಪ್ರಕಾರ ಸುಮಾರು 14,749 ಕೋಟಿ ರೂ.ಗಳಷ್ಟು ಏಕೀಕೃತ ನಷ್ಟವಾಗಿದೆ. ಮೇ 2018 ರಲ್ಲಿ ಈ ಘಟಕದಲ್ಲಿ ಮಾಲಿನ್ಯವಾಗುತ್ತಿದೆ ಎಂದು ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದರು. ಅಲ್ಲಿಂದ ಕಂಪನಿಯು ಮುಚ್ಚಲ್ಪಟ್ಟಿದ್ದು ಕಳೆದ ನಾಲ್ಕುವರ್ಷಗಳಿಂದ ಮುಚ್ಚಲ್ಪಟ್ಟಿರುವ ತಾಮ್ರ ಘಟಕವನ್ನು ಕಂಪನಿಯು ಮಾರಾಟಕ್ಕೆ ತೆರೆದಿಟ್ಟಿರುವ ಒಂದು ತಿಂಗಳ ನಂತರ ಈ ವರದಿಯು ಹೊರಬಂದಿದೆ.

ವರದಿಯಲ್ಲಿನ ಮಾಹಿತಿಯ ಪ್ರಕಾರ ಮೇ 2018 ರಲ್ಲಿ ಘಟಕವು ಮುಚ್ಚಿದಾಗಿನಿಂದ ಏಕೀಕೃತ ನಷ್ಟವು ಸುಮಾರು 14,749 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕಂಪನಿಯು ಮುಚ್ಚಿರುವುದರಿಂದ ತಮಿಳುನಾಡು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (SGDP) ಮೇಲೆ 0.72% ದಷ್ಟು ನಷ್ಟವಾಗಿದೆ. ಅಲ್ಲದೇ ಕಂಪನಿಗೆ ಸುಮಾರು ₹ 4,777 ಕೋಟಿ ನಷ್ಟವಾಗಿದೆ. ಅಲ್ಲದೇಸರ್ಕಾರವು ತೆರಿಗೆ ಮತ್ತು ಸುಂಕಗಳ ರೂಪದಲ್ಲಿ ಗಣನೀಯ ಆದಾಯವನ್ನು ಕಳೆದುಕೊಳ್ಳುತ್ತಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!