ಏಳು ತ್ರೈಮಾಸಿಕದ ನಂತರ ಮೊದಲಬಾರಿಗೆ 2,958 ಕೋಟಿ ರೂ. ಲಾಭ ದಾಖಲಿಸಿದ ಟಾಟಾ ಮೋಟಾರ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಿದ್ಧ ಮೋಟಾರು ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್‌ ಮೂರನೇ ತ್ರೈಮಾಸಿಕದಲ್ಲಿ 2,958 ಕೋಟಿ ರೂಪಾಯಿಗಳ ಲಾಭವನ್ನು ದಾಖಲಿಸಿದೆ. ಈ ಹಿಂದಿನ ಏಳು ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್‌ ಹೆಚ್ಚಿನ ಲಾಭವನ್ನೇನೂ ಮಾಡಿರಲಿಲ್ಲ. ಆದರೆ ಈ ತ್ರೈಮಾಸಿಕದಲ್ಲಿ ಮಾರುಕಟ್ಟೆಯನ್ನು ಸೋಲಿಸುವಂತಹ ಲಾಭ ದಾಖಲಿಸಿದೆ.

ದೇಶೀಯ ಮಾರಾಟದಲ್ಲಿ ವರ್ಷಕ್ಕೆ 17.7 ಶೇಕಡಾ ಹೆಚ್ಚಳವನ್ನು ದಾಖಲಿಸಿದ್ದು ಜಾಗತಿಕವಾಗಿ ಟಾಟಾ ಮೋಟಾರ್ಸ್‌ ನ ಅಂಗಸಂಸ್ಥೆಯಾದ ಲ್ಯಾಂಡ್ ರೋವರ್‌ನ ಸಗಟು ಮಾರಾಟದಲ್ಲಿ 15.5 ಶೇಕಡಾ ಬೆಳವಣಿಗೆಯಾಗಿದೆ. ಇದು ಟಾಟಾ ಮೋಟಾರ್ಸ್‌ ನ ಲಾಭಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಈ ಹಿಂದೆ ಟಾಟಾ ಮೋಟಾರ್ಸ್‌ ಡಿಸೆಂಬರ್ 2020 ರಲ್ಲಿ 2,906 ಕೋಟಿ ರೂ. ಏಕೀಕೃತ ನಿವ್ವಳ ಲಾಭವನ್ನು ಪ್ರಕಟಿಸಿತ್ತು.

ತಡೆರಹಿತ ಹಬ್ಬದ ಋತುಗಳ ಖರೀದಿ ಹಾಗು ಹೊಸ ಹೊಸ ವಾಹನಗಳ ಬಿಡುಗಡೆಯು ಡಿಸೆಂಬರ್‌ ನಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್‌ ಲಾಭ ಗಳಿಸುವಂತೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ 50,000 ಯುನಿಟ್‌ ಗಳ ಮಾಸಿಕ ಚಿಲ್ಲರೆ ಮಾರಾಟದ ಗುರಿಯನ್ನು ತಲುಪಿರುವುದಾಗಿ ಟಾಟಾ ಮೋಟಾರ್ಸ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!