PHOTO GALLERY| ಗಣರಾಜ್ಯೋತ್ಸವಕ್ಕೆ ವಿದ್ಯುತ್‌ ದೀಪಾಲಂಕಾರದಿಂದ ಮಿನುಗುತ್ತಿವೆ ಸರ್ಕಾರ ಕಟ್ಟಡಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

74ನೇ ಗಣರಾಜೋತ್ಸವ ಸಂಭ್ರಮದಲ್ಲಿ ದೇಶಾದ್ಯಂತ ಸರ್ಕಾರಿ ಕಟ್ಟಡಗಳು ತ್ರಿವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ದೇಶದ ಬಹುತೇಕ ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಮಿನುಗುತ್ತಿವೆ. ನೋಡುಗರ ಮನಸೂರೆ ಮಾಡಿದ್ದು, ಕಣ್ಣುಗೆ ಆನಂದವನ್ನುಂಟು ಮಾಡುತ್ತಿದೆ.

ಹೈದರಾಬಾದ್‌ನ ಸುಪ್ರಸಿದ್ಧ ಚಾರ್ ಮಿನಾರ್ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದೆ.

ಗಣರಾಜ್ಯೋತ್ಸವ ಹಿನ್ನೆಲೆ ಹೈದರಾಬಾದ್‌ನ ಪ್ರಸಿದ್ಧ ಚಾರ್ ಮಿನಾರ್ ತ್ರಿವರ್ಣ ಧ್ವಜದ ಬಣ್ಣಗಳಿಂದ ಮಿನುಗುತ್ತಿದೆ. ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತಿದೆ.

ತ್ರಿವರ್ಣದಲ್ಲಿ ಮಿನುಗುತ್ತಿರುವ ಪುದುಚೆರಿಯ ಸರ್ಕಾರಿ ಕಟ್ಟಡಗಳು

ಪುದುಚೆರಿಯಲ್ಲೂ ಸರ್ಕಾರಿ ಕಟ್ಟಡಗಳಿಗೆ ತ್ರಿವರ್ಣ ರಂಗು ನೀಡಲಾಗಿದೆ. ಇಡೀ ನಗರ ದೇಶ ಪ್ರೇಮವನ್ನು ಬಡಿದಬ್ಬಿಸಿದಂತಿದೆ.

ಕೋಲ್ಕತ್ತಾದ ರಾಜಭವನ

ಕೋಲ್ಕತ್ತಾದ ರಾಜಭವನವು ತ್ರಿವರ್ಣ ಬಣ್ಣಗಳಲ್ಲಿ ಮೇಲೈಸುತ್ತಿದೆ. ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

ಜೈಪುರದಲ್ಲಿನ ಸರ್ಕಾರಿ ಕಟ್ಟಡಗಳು ತ್ರಿವರ್ಣ ರಂಗಿನಲ್ಲಿ ಮಿಂಚು

ರಾಜಸ್ಥಾನ ಜೈಪುರದಲ್ಲಿ ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿವೆ. ಇಲ್ಲಿನ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ತ್ರಿವರ್ಣ ಬಣ್ಣ ನೀಡಲಾಗಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಬಿಎಂಸಿ ಪ್ರಧಾನ ಕಚೇರಿಯ ವೈಭವ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, BMC ಪ್ರಧಾನ ಕಚೇರಿ ಸೇರಿದಮತೆ ಸರ್ಕಾರಿ ಕಟ್ಟಡಗಳು ತ್ರಿವರ್ಣ ಧ್ವಜದ ಬಣ್ಣದಲ್ಲಿ ಪ್ರಕಾಶಿಸುತ್ತಿವೆ.

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದ ಗಡಿಯಾರ ಗೋಪುರ

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದ ಗಡಿಯಾರ ಗೋಪುರವು ತ್ರಿವರ್ಣ ಬಣ್ಣಗಳಿಂದ ಮಿನುಗುತ್ತಿರುವ ದೃಶ್ಯ.

 

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದ ಗಡಿಯಾರ ಗೋಪುರವು ತ್ರಿವರ್ಣ ಬಣ್ಣಗಳಿಂದ ಮಿನುಗುತ್ತಿರುವ ದೃಶ್ಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!