ರಾಜ್ಯದಲ್ಲಿ ಇಂದು 297 ಜನರಿಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇಂದು 297 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 1,136ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ( Karnataka Health and Family Welfare Department ) ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ RTPC ಮೂಲಕ 6,548 ಹಾಗೂ RAT ಮೂಲಕ 808 ಸೇರಿದೆತ 7,356 ಮಂದಿಯನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ( Covid19 Test ) ಒಳಪಡಿಸಲಾಗಿದೆ.

ಬೆಂಗಳೂರು ನಗರ 171, ಬಾಗಲಕೋಟೆ 05, ಬಳ್ಳಾರಿ 06, ಬೆಂಗಳೂರು ಗ್ರಾಮಾಂತರ 12, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿತ್ರದುರ್ಗ 05, ದಕ್ಷಿಣ ಕನ್ನಡ 06, ದಾವಣಗೆರೆ 01, ಧಾರವಾಡ 08, ಗದಗ 02, ಹಾವೇರಿ 04, ಕಲಬುರ್ಗಿ 05, ಕೊಡಗು 01, ಕೋಲಾರ 03, ಕೊಪ್ಪಳ 08, ಮಂಡ್ಯ 06, ಮೈಸೂರು 26, ರಾಯಚೂರು 02 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದಿದೆ.

ರಾಮನಗರ 06, ಶಿವಮೊಗ್ಗ, ವಿಜಯನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ನಾಲ್ವರು, ವಿಜಯನಗರ 01 ಸೇರಿದಂತೆ 297 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!