ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಎಡವಟ್ಟು ಮಾಡಿಕೊಂಡಿದ್ದಾರೆ. ಜಮೀರ್ ಅಹ್ಮದ್ ಖಾನ್ ಕ್ಯಾಮೆರಾಗಳ ಎದುರಲ್ಲೇ 3 ಲಕ್ಷ ರೂಪಾಯಿ ಹಾರ್ಡ್ ಕ್ಯಾಶ್‌ಅನ್ನು ಸಂತ್ರಸ್ಥೆಯೊಬ್ಬರಿಗೆ ನೀಡಿದ್ದಾರೆ.ಆದಾಯ ತೆರಿಗೆ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
ದೇಶದಲ್ಲಿ ಕ್ಯಾಶ್ ಡೆಪಾಸಿಟ್ ಹಾಗೂ ಕ್ಯಾಶ್ ವಿತ್‌ಡ್ರಾವಲ್ ಬಗ್ಗೆ ಸಾಕಷ್ಟು ನಿಯಮಗಳಿವೆ. ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಹಣವನ್ನು ನಗದು ರೂಪದಲ್ಲಿ ಇರಿಸಿಕೊಳ್ಳಬಹುದು ಎನ್ನುವುದಕ್ಕೂ ನಿಯಮವಿದೆ. ಅದರೊಂದಿಗೆ ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ಯಾವುದೇ ರೂಪದಲ್ಲಿ ಹಣ ಸಲ್ಲಿಕೆಯಾಗಬೇಕೆಂದರೂ ಅದಕ್ಕಾಗಿಯೇ ಒಂದು ನಿಯಮವಿದೆ. ಬ್ಯಾಂಕ್‌ಗಳಿಂದ ನೀವು ಕ್ಯಾಶ್ ರೂಪದಲ್ಲಿ 50 ಸಾವಿರ ರೂಪಾಯಿ ಹಣನ್ನು ಮಾತ್ರವೇ ಪಡೆದುಕೊಳ್ಳಲು ಸಾಧ್ಯ. ಉಳಿದ ವ್ಯವಹಾರಕ್ಕೆ ಕಡ್ಡಾಯವಾಗಿ ಪಾನ್‌ಕಾರ್ಡ್‌ನೊಂದಿಗೆ ವ್ಯವಹಾರ ಮಾಡಬೇಕು. ಆದರೆ, ಜಮೀರ್ 3 ಲಕ್ಷ ರೂಪಾಯಿ ಹಾರ್ಡ್ ಕ್ಯಾಶ್‌ಅನ್ನು ಸಂತ್ರಸ್ಥೆಯೊಬ್ಬರಿಗೆ ನೀಡಿರುವುದು ಈಗ ನಿಯಮ ಉಲ್ಲಂಘನೆ ಎನಿಸಿದೆ.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ತಡಸ ಗ್ರಾಮದ ದಿವಂಗತ ಮಹಮ್ಮದ್ ಶಾಹಿದ್ ಅವರ ಕುಟುಂಬಕ್ಕೆ ಜೀವನೋಪಾಯಕ್ಕಾಗಿ ವೈಯಕ್ತಿಕವಾಗಿ ರೂ.300,000/- (ಮೂರು ಲಕ್ಷ ರೂಪಾಯಿ) ನೀಡಿದ್ದೇನೆ’ ಎಂದು ಜಮೀರ್ ಅಹ್ಮದ್ ಖಾನ್ ಬರೆದುಕೊಂಡಿದ್ದು, ಅದರ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ನೋಟಿನ ಕಟ್ಟುಗಳನ್ನು ಹಿಡಿದುಕೊಂಡಿರುವ ಜಮೀರ್ ಅಹ್ಮದ್ ಅದನ್ನು ಮಹಿಳೆಗೆ ನೀಡುತ್ತಾರೆ.
ಆದ್ರೆ ವೈಯಕ್ತಿಕವಾಗಿ ಆಗಲಿ ಸರ್ಕಾರದ ಮಟ್ಟದಲ್ಲಿಯೇ ಆಗಲಿ ಯಾರಿಗೇ ಆದರೂ ಪರಿಹಾರ ಮೊತ್ತವನ್ನು ಚೆಕ್‌ನಲ್ಲಿ ನೀಡುವುದು ವಾಡಿಕೆ. ಜಮೀರ್ ಅಹ್ಮದ್ ಖಾನ್ ಇಲ್ಲೂ ಕೂಡ ಅದನ್ನೇ ಮಾಡಬೇಕಿತ್ತು. ಆದರೆ, ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ಮೀರಿ 3 ಲಕ್ಷ ನಗದು ಹಣದ ಕಟ್ಟನ್ನು ಅವರು ಪರಿಹಾರವಾಗಿ ನೀಡಿದ್ದಾರೆ. ಇದು ಹಣ ಪಡೆದುಕೊಂಡಿರುವ ಕುಟುಂಬಕ್ಕೂ ಸಮಸ್ಯೆ ತಂದೊಡ್ಡಲಿದೆ. ಇನ್ನೂ ಹಣ ನೀಡಿರುವ ಜಮೀರ್ ಅಹ್ಮದ್ ಖಾನ್ ಮೇಲೂ ಈ ಕುರಿತಾಗಿ ಆದಾಯ ತೆರಿಗೆ ಇಲಾಖೆ ಕ್ರಮ ತೆಗೆದುಕೊಳ್ಳಬಹುದು.
ಆದಾಯ ತೆರಿಗೆ ನಿಯಮ ಪ್ರಕಾರ , ಆದಾಯ ತೆರಿಗೆ ಇಲಾಖೆಯ 40 ಸೆಕ್ಷನ್ ಹಾಗೂ 30ಎ ಸಬ್‌ಸೆಕ್ಷನ್ ಪ್ರಕಾರ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ 10 ಸಾವಿರ ರೂಪಾಯಿಯಷ್ಟು ಮಾತ್ರವೇ ನಗದು ರೂಪದಲ್ಲಿ ನೀಡಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಬೇಕಿದ್ದಲ್ಲಿ ಚೆಕ್ ಅಥವಾ ಬ್ಯಾಂಕ್ ಟ್ರಾನ್ಸ್‌ಫರ್ ಬಳಸಿಕೊಳ್ಳಬೇಕು. ಆದರೆ, ಜಮೀರ್ ಅಹ್ಮದ್ ಇಲ್ಲಿ ಇದ್ಯಾವುದನ್ನೂ ಮಾಡಿಲ್ಲ. ಕ್ಯಾಶ್ ಟು ಕ್ಯಾಶ್ ಟ್ರಾನ್ಸ್‌ಫರ್ ವಿವಾದಕ್ಕೆ ಕಾರಣವಾಗಬಹುದು.