ರಾಹುಲ್ ಗಾಂಧಿಗೆ 3 ವರ್ಷಗಳ ಸಾಮಾನ್ಯ ಪಾಸ್‌ಪೋರ್ಟ್: ದೆಹಲಿ ಕೋರ್ಟ್ ಅನುಮತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್​​​ ನಾಯಕ ರಾಹುಲ್​​​ ಗಾಂಧಿ (Rahul Gandhi)ಗೆ ಹೊಸ ಸಾಮಾನ್ಯ ಪಾಸ್‌ಪೋರ್ಟ್ ನೀಡಲು ಎನ್‌ಒಸಿ (No Objection Certificate) ಕೋರಿ ದೆಹಲಿ ಕೋರ್ಟ್​​ಗೆ ಮನವಿ ಸಲ್ಲಿಸಿದ್ದರು, ಕೋರ್ಟ್ಮನವಿಗೆ ಇಂದು (ಮೇ 26) ಭಾಗಶಃ ಅನುಮತಿ ನೀಡಿದೆ. 3 ವರ್ಷಗಳ ಕಾಲ ಎನ್‌ಒಸಿ ನೀಡಿದೆ.

ರಾಹುಲ್ ಗಾಂಧಿ ಅವರು ಸಂಸತ್ತಿನಿಂದ ಅನರ್ಹಗೊಂಡ ನಂತರ ಅವರ ಸಂಸದ ಸವಲತ್ತುಗಳನ್ನು ಕಳೆದುಕೊಂಡಿದ್ದರು, ಇದೀಗ ಮೂರು ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ದೆಹಲಿ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.

ರಾಹುಲ್​​​​ ಗಾಂಧಿ ಅವರು ತಮ್ಮ ಅನರ್ಹತೆಯ ನಂತರ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್​​ನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರ ಅವರು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ನ್ಯಾಯಲಯಕ್ಕೆ 10 ವರ್ಷಗಳ ಅನುಮತಿ ನೀಡಬೇಕು ಎಂದು ಮನವಿ ಮಾಡಿದ ರಾಹುಲ್​​ ಗಾಂಧಿ, ಇದಕ್ಕೆ ಒಪ್ಪದ ನ್ಯಾಯಲಯ 3 ವರ್ಷಗಳ ಕಾಲವಧಿಗೆ ಅನುಮತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!