ದಿನಭವಿಷ್ಯ | ಭಾನುವಾರದ ರಾಶಿಫಲಗಳು ಹೀಗಿವೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಆಂತರಿಕ ತುಮುಲ. ಇದರಿಂದ ದಿನವಿಡೀ ಕಿರಿಕಿರಿ. ಸಣ್ಣ ಸಣ್ಣ ವಿಷಯಕ್ಕೂ ರೇಗುವಿರಿ. ಆಪ್ತರ ಸಂಗದಲ್ಲಿ ಸಮಾಧಾನ ಪಡೆಯುವಿರಿ.

ವೃಷಭ
ಅನವಶ್ಯ ವಾಗ್ವಾದದಲ್ಲಿ ತೊಡಗಬೇಡಿ. ಅದರಿಂದ ನಿಮ್ಮ ಮನಶ್ಯಾಂತಿ ಹಾಳೇ ಹೊರತು ಬೇರೇನೂ ಸಾಧಿಸಲಾರಿರಿ. ಕೌಟುಂಬಿಕ ಸಹಕಾರ.

ಮಿಥುನ
ನಿಮ್ಮ ಗುಣಾತ್ಮಕ ಮನೋಭಾವ ಇತರರನ್ನು ಆಕರ್ಷಿಸುವುದು. ಇತರರ ಚಿಂತೆ ನೀಗುವಲ್ಲಿ ಸಹಕಾರ ನೀಡುವಿರಿ.

ಕಟಕ
ನಿಮ್ಮ ಸುತ್ತ ಉದ್ವಿಗ್ನ ವಾತಾವರಣ ನೆಲೆಸಿರುವುದು. ನೀವು ಸಮಾಧಾನದಿಂದ ವರ್ತಿಸಿ. ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳಲು ಅವಕಾಶ ಕೊಡದಿರಿ.

ಸಿಂಹ
ಹೊಸ ವ್ಯವಹಾರ ಆರಂಭಿಸಿದಲ್ಲಿ ಅದರಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಮುಗ್ಗಟ್ಟು ನಿವಾರಣೆ. ಕುಟುಂಬದಲ್ಲಿ ಶಾಂತಿ ಮತ್ತು ಸಹಕಾರ.

ಕನ್ಯಾ
ವ್ಯಕ್ತಿಯೊಬ್ಬರ ಕುರಿತು ಆಕರ್ಷಣೆ ಬೆಳೆಸಿಕೊಳ್ಳುವಿರಿ. ಅವರ ಸಂಗಕ್ಕಾಗಿ ಹಾತೊರೆಯುವಿರಿ. ಆರ್ಥಿಕ ಒತ್ತಡ ಕಾಡಬಹುದು.

ತುಲಾ
ವಾದ ಕಡಿಮೆ ಮಾಡಿ, ಒಪ್ಪಿಕೊಳ್ಳುವುದನ್ನು ಹೆಚ್ಚು ಮಾಡಿ. ಆಗ ಸಂಘರ್ಷದ ವಾತಾವರಣ ನೀಗುವುದು. ಇದು ನಿಮಗಿಂದು ಸಲಹೆ.

ವೃಶ್ಚಿಕ
ಕೆಲಸದ ಹೊರೆ ಹೆಚ್ಚು. ಬಾಕಿ ಇರುವ ಹೊಣೆಯನ್ನು ನಿಭಾಯಿಸಿ. ಅದರಿಂದ ನಿರಾಳತೆ ಪಡೆಯುವಿರಿ. ಕುಟುಂಬ ಸದಸ್ಯರ ಜತೆ ಭಿನ್ನಮತ.

ಧನು
ಪ್ರತಿಕೂಲ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಬದಲಿಸಿಕೊಳ್ಳಲು ಸಫಲರಾಗುವಿರಿ. ಆತ್ಮೀಯರ ಸಂಗದಲ್ಲಿ ಕಾಲಕ್ಷೇಪ.

ಮಕರ
ದೈಹಿಕ ಹಾಗೂ ಮಾನಸಿಕ ಬಳಲಿಕೆ ಕಾಡಬಹುದು. ಅದಕ್ಕೆ ಅಧಿಕ ಕೆಲಸ ಕಾರಣವಾಗುತ್ತದೆ. ವಿಶ್ರಾಂತಿ ಪಡೆಯಲು ಪ್ರಯತ್ನಿಸಿ.

ಕುಂಭ
ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಇತರರ ಜತೆ ಬೆರೆಯದೆ, ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ಏನೋ ಕೊರತೆ ನಿಮ್ಮನ್ನು ಬಾಧಿಸುವುದು.

ಮೀನ
ಮಾನಸಿಕ ಸಂಘರ್ಷ. ಗತ ನೆನಪುಗಳು ಕಾಡಬಹುದು. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿ. ದುಂದುವೆಚ್ಚ ತಪ್ಪಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!