ಭಗತ್ ಸಿಂಗ್, ಸಹಚರರನ್ನು ಗಲ್ಲಿಗೇರಿಸುವುದನ್ನು ವಿರೋಧಿಸಿ ಹೋರಾಡಿದ್ದರು ಕುರುಕ್ಕಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎನ್.ಪಿ.ಕುರುಕ್ಕಲ್ ಅವರು 21 ಡಿಸೆಂಬರ್ 1904 ರಂದು ಕೇರಳಾದ ತಿರುವನಂತಪುರದಲ್ಲಿ ಜನಿಸಿದರು. 1921ರಲ್ಲಿ ತಿರುವಾಂಕೂರಿನಲ್ಲಿ ಅಗತ್ಯವಸ್ತುಗಳ ಬೆಲೆ ಹೆಚ್ಚಳದ ವಿರುದ್ಧ ನಡೆದ ವಿದ್ಯಾರ್ಥಿ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು. ಅವರು ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ತಿರುವನಂತಪುರದಲ್ಲಿ ರಚಿಸಲಾದ ನಗರ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು ಮತ್ತು ನಾಗರಿಕ ಅಸಹಕಾರ ಚಳವಳಿಗೆ ಸಂಬಂಧಿಸಿದಂತೆ ಅನೇಕ ಆಂದೋಲನಗಳನ್ನು ಆಯೋಜಿಸಿದರು. ವಿದೇಶಿ ಬಟ್ಟೆ ಬಹಿಷ್ಕರಿಸಿ, ಮದ್ಯ ಮಾರಾಟದ ಅಂಗಡಿಗಳನ್ನು ಬಹಿಷ್ಕರಿಸಿ ಸ್ವಾತಂತ್ರ್ಯ ಚಳವಳಿಯ ವಿವಿಧ ಆಂದೋಲನಗಳಲ್ಲಿ ಭಾಗವಹಿಸಿದ್ದರು. ಅವರು 1931 ರಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಇತರರನ್ನು ಗಲ್ಲಿಗೇರಿಸುವುದರ ವಿರುದ್ಧ ತಿರುವಾಂಕೂರಿನಲ್ಲಿ ನಡೆದ ಚಳವಳಿಗಳ ನಾಯಕರಾಗಿದ್ದರು. ಅವರು 21 ಡಿಸೆಂಬರ್ 1946 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!