ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಂಭಮೇಳದಲ್ಲಿ ನಾವಿಕನೊಬ್ಬ ಸಂಪಾದಿಸಿದ 30 ಕೋಟಿ ಆದಾಯ ಆತನನ್ನು ತೆರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಹೌದು! ನಾವಿಕ ಪಿಂಟು ತಾಯಿಯ ಚಿನ್ನವನ್ನು ಅಡವಿಟ್ಟು ಸಾಕಷ್ಟು ಬೋಟ್‌ಗಳನ್ನು ಖರೀದಿ ಮಾಡಿ, 45 ದಿನಗಳ ಕುಂಭಮೇಳದಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಆದಾಯ ಗಳಿಸಿದ್ದ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ವತಃ ಯೋಗಿ ಆದಿತ್ಯನಾಥ್ ಈತನ ಕಥೆಯನ್ನು ವಿಧಾನಸಭೆಯಲ್ಲಿ ಹೇಳಿದ್ದರು.
ಈಗ ₹30 ಕೋಟಿ ಗಳಿಸಿದ್ದ ನಾವಿಕ ₹12.80 ಕೋಟಿ ತೆರಿಗೆ ಕಟ್ಟಬೇಕಾಗಿದೆ. ತೆರಿಗೆ ಅಧಿಕಾರಿಗಳು ತಮ್ಮ ಪಾಲನ್ನು ಕೇಳುತ್ತಿರುವುದರಿಂದ ಅವರ ಅನಿರೀಕ್ಷಿತ ಸಂಪತ್ತು ಆರ್ಥಿಕ ಸವಾಲಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಧ್ಯಸ್ಥಿಕೆಗೆ ಈಗ ಅನೇಕರು ಮನವಿ ಮಾಡಿದ್ದಾರೆ.