ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಮುಂದಿನ ಮಾರ್ಚ್ 15ರವರೆಗೆ ಜಮ್ಮು ಕಾಶ್ಮೀರದಿಂದ ಬಿಹಾರ, ಈಶಾನ್ಯ ಪಶ್ಚಿಮ ಬಂಗಾಳದವರೆಗೆ ಮತ್ತು ಕೇರಳದಿಂದ ತಮಿಳುನಾಡಿನವರೆಗೆ ಭಾರತೀಯ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.
ಎರಡು ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಿದ ಹವಮಾನ ಇಲಾಖೆ, ಮುಂದಿನ 24 ಗಂಟೆಯಲ್ಲಿ ಸೈಕ್ಲೋನ್ ಭಾರತದ ಭೂಭಾಗವನ್ನು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದೆ. ಇಂದಿನಿಂದ ತಮಿಳುನಾಡಿನ ದಕ್ಷಿಣ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೈಕ್ಲೋನ್ ಸರ್ಕ್ಯೂಲೇಷನ್ ಅಲರ್ಟ್ ನೀಡಿರುವ ಭಾರತೀಯ ಹವಾಮಾನ ಇಲಾಖೆ, ನಿಧಾನವಾಗಿ ಉತ್ತರ ಭಾರತದ ಪರ್ವತ ಪ್ರದೇಶಗಳ ರಾಜ್ಯದಲ್ಲಿ ಸೈಕ್ಲೋನ್ ಪರಿಣಾಮ ಬೀರಲಿದ್ದು, ಇದರಿಂದ ಮಳೆಯಾಗಲಿದೆ. ಪಕ್ಕದ ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಗಳಿವೆ.