ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಮೂರು ಸಾವಿರ ವೈಫೈ ಝೋನ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ರಾಜಧಾನಿ ಬೆಂಗಳೂರಿಗೆ ವೈಫೈ ಸೇವೆ ಅಗತ್ಯ ಇದೆ. ಕನಿಷ್ಠ ಮೂರು ಸಾವಿರ ವೈಫೈ ಸ್ಪಾಟ್‌ಗಳನ್ನು ಮೊದಲು ನಿರ್ಮಾಣ ಮಾಡಲಾಗುವುದು. ಜನರು ಹೆಚ್ಚು ಇರುವ ಪ್ರದೇಶಗಳಾದ ಮಾರ್ಕೆಟ್, ರೈಲ್ವೆ ನಿಲ್ದಾಣ, ಮೆಟ್ರೋಗಳಲ್ಲಿ ಇಂಟರ್ನೆಟ್ ಸೇವೆ ಅಗತ್ಯ ಹೆಚ್ಚಿರುತ್ತದೆ. ಅಲ್ಲಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು.
ತದನಂತರ ಇದನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸಬಹುದಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಎಂಜಿ ರಸ್ತೆಯಲ್ಲಿ ವೈಫೈ ಕೇಂದ್ರ ಪ್ರಾರಂಭಾಗಿದೆ. ಪ್ರತಿಯೊಬ್ಬರೂ ಮೂರು ಗಂಟೆಗಳ ಕಾಲ ಬ್ರೌಸಿಂಗ್ ಮಾಡಬಹುದಾಗಿದೆ.