October 12, 2026
Monday, October 12, 2026
spot_img

ಹೀಟ್‌ಸ್ಟ್ರೋಕ್‌ನಿಂದ ತುಮಕೂರಿನಲ್ಲಿ 32 ನವಿಲುಗಳ ಸಾವು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲು ಅತಿಯಾಗಿದೆ. ಜನರಂತೆಯೇ ಪ್ರಾಣಿಪಕ್ಷಿಗಳು ಕೂಡ ಈ ಬಿಸಿಲಿನಿಂದ ಹೈರಾಣಾಗಿವೆ.

ತುಮಕೂರು ಜಿಲ್ಲೆಯ ವಿವಿಧ ಭಾಗದಲ್ಲಿ ಒಟ್ಟಾರೆ 32 ನವಿಲುಗಳು ಮೃತಪಟ್ಟಿವೆ. ಈ ನವಿಲುಗಳು ಹೀಟ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿರುವ ಶಂಕೆ ಇದೆ.

ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂಧ್ರ, ಹುಲ್ಲೆನಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕಳೆದ ಐದು ದಿನಗಳಲ್ಲಿ 32 ನವಿಲುಗಳು ಉಸಿರುಚೆಲ್ಲಿವೆ. ಊರಿನ ಜನ ನವಿಲುಗಳ ಕಳೇಬರ ನೋಡಿ ಗಾಬರಿಯಾಗಿದ್ದು, ಬಿಸಿಲು ಸಹಿಸಿಕೊಳ್ಳಲು ಆಗದೇ ಮೃತಪಟ್ಟಿರಬಹುದು ಎನ್ನುತ್ತಿದ್ದಾರೆ.

ಮೃತ ನವಿಲುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ನವಿಲುಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Must Read