ರಾಜ್ಯದಲ್ಲಿ ಇಂದು 329 ಜನರಿಗೆ ಕೊರೋನಾ, ಓರ್ವ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇಂದು 329 ಜನರಿಗೆ ಕೊರೋನಾ ಪಾಸಿಟಿವ್ ( Corona Positive )ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 1181 ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ( Karnataka Health and Family Welfare Department ) ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ RTPC ಮೂಲಕ 3367 ಹಾಗೂ RAT ಮೂಲಕ 452 ಸೇರಿದೆತ 3819 ಮಂದಿಯನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ( Covid19 Test ) ಒಳಪಡಿಸಲಾಗಿದೆ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 283 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1181ಕ್ಕೆ ಏರಿಕೆಯಾಗಿದೆ. ಇಂದು ಕೋವಿಡ್ ಸೋಂಕಿನಿಂದ ಒಂದು ಸಾವು ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!