ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿರುವ ಜನರಿಗೆ ಇದೆಂಥಾ ಪರಿಸ್ಥಿತಿ ಬಂದಿದೆ? ಪಾಕ್‌ನ ಆಸ್ಪತ್ರೆಗಳಲ್ಲಿ ಒಬ್ಬರ ಸಿರಿಂಜ್‌ನ್ನೇ ಮತ್ತೊಬ್ಬರಿಗೂ ಹಾಕಿದ್ದು, 31 ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿದೆ.
ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿ ಮಾಡಲಾಗಿದೆ. ಇದ್ದಕ್ಕಿದ್ದಂತೆಯೇ ಮಕ್ಕಳಲ್ಲಿ ಎಚ್‌ಐವಿ ಪ್ರಕರಣಗಳು ಹೆಚ್ಚಾಗಿದ್ದು, ತನಿಖೆ ಮಾಡಲಾಗಿದೆ. ಈ ವೇಳೆ ವಿಷಯ ಬಯಲಿಗೆ ಬಂದಿದೆ.
ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ಸೋರಿಕೆಯಾದ ಪೊಲೀಸ್ ದಾಖಲೆಗಳ ಡೇಟಾವನ್ನು ಬಳಸಿಕೊಂಡು ತನಿಖಾ ವರದಿ ಮಾಡಲಾಗಿದೆ. 2024ರ ನವೆಂಬರ್‌ನಿಂದ 2025 ರ ಅಕ್ಟೋಬರ್ ನಡುವೆ ಟೌನ್ಸಾದಲ್ಲಿ ಹೆಚ್‌ಐವಿ ಪಾಸಿಟಿವ್ ಪರೀಕ್ಷೆಯಲ್ಲಿ 331 ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ.



