ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಘಾಟ್‌ಕೋಪರ್‌ನ ಪಂತ್‌ನಗರದ ಲಕ್ಷ್ಮಿ ನಗರ ಪ್ರದೇಶದಲ್ಲಿ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಫ್ಲೆಮಿಂಗೋಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.
ಮುಂಬೈಗೆ ಬರುವ ಫ್ಲೆಮಿಂಗೋಗಳೇ ಜನರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅದನ್ನು ನೋಡಲು ಎಲ್ಲೆಲ್ಲಿಂದಲೋ ಜನರು ಆಗಮಿಸುತ್ತಾರೆ. ಆದರೆ ಏಕಾಏಕಿ 30ಕ್ಕೂ ಅಧಿಕ ಫ್ಲೆಮಿಂಗೋಗಳು ಮೃತಪಟ್ಟಿದ್ದು, ಪಕ್ಷಿಪ್ರೇಮಿಗಳಿಗೆ ನೋವುಂಟುಮಾಡಿದೆ.
ಘಾಟ್ಕೋಪರ್ ಪೂರ್ವ ಪ್ರದೇಶದ ರಸ್ತೆಯಲ್ಲಿ ಫ್ಲೆಮಿಂಗೊ ಪಕ್ಷಿಗಳ ಮೃತ ದೇಹಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿವೆ. ಈ ಫ್ಲೆಮಿಂಗೊಗಳಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಫ್ಲೆಮಿಂಗೋಗಳ ಹಿಂಡು ಆಕಾಶದಲ್ಲಿ ಹಾರಾಡುತ್ತಿದ್ದಾಗ ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಸಾಧ್ಯತೆಯನ್ನು ಪಕ್ಷಿ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಸುಳ್ಳು ಎಂದು ಹೇಳುತ್ತಿದ್ದು, ಮಾಹಿತಿ ಹೊರಬೀಳಬೇಕಿದೆ.