ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆಯಡಿ ಇನ್‌ಕ್ಯುಬೇಟರ್‌ಗಳಿಗೆ 375 ಕೋಟಿ ರೂ. ಅನುಮೋದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (ಎಸ್‌ಐಎಸ್‌ಎಫ್‌ಎಸ್) ಅಡಿಯಲ್ಲಿ ಇನ್‌ಕ್ಯುಬೇಟರ್‌(ನವೋದ್ಯಮಿಗಳಿಗೆ ಸಂಪನ್ಮಙುಲ ಒದಗಿಸುವ ಕಾರ್ಯಸ್ಥಳ) ಗಳಿಗೆ ಒಟ್ಟೂ 375 ಕೋಟಿ ರೂ.ಗಳನ್ನು ಈ ವರ್ಷದ ಜುಲೈ 30 ರವರೆಗೆ ಅನುಮೋದಿಸಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ. ಈ ಕಾರ್ಪಸ್‌ ಫಂಡ್‌ ನ ಒಟ್ಟೂ ಮೊತ್ತ 945 ಕೋಟಿಯಷ್ಟಿದೆ

ಸರ್ಕಾರವು 1 ಏಪ್ರಿಲ್ 2021 ರಿಂದ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (SISFS)ಅನ್ನು ಜಾರಿಗೆ ತರುತ್ತಿದೆ. ಇದು ನವೋದ್ಯಮಿಗಳಿಗೆ ತಮ್ಮ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಹಾಯ ನೀಡುತ್ತದೆ. ಇದು ಉದ್ಯಮ ಮತ್ತು ಆಂತರಿಕ ವ್ಯಾಪಾರ (DPIIT) ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸ್ಟಾರ್ಟಪ್‌ ಗಳ ಪರಿಕಲ್ಪನೆಯ ಪುರಾವೆ, ಮೂಲಮಾದರಿಯ ಅಭಿವೃದ್ಧಿ, ಉತ್ಪನ್ನ ಪ್ರಯೋಗಗಳು, ಮಾರುಕಟ್ಟೆ ಪ್ರವೇಶ ಮತ್ತು ವಾಣಿಜ್ಯೀಕರಣಕ್ಕೆ ಸಹಾಯ ಮಾಡುತ್ತದೆ.

ಇದು ಏಂಜೆಲ್ ಹೂಡಿಕೆದಾರರು ಅಥವಾ ಬಂಡವಾಳಗಾರರಿಂದ ಹೂಡಿಕೆಗಳನ್ನು ಸಂಗ್ರಹಿಸಲು ಅಥವಾ ವಾಣಿಜ್ಯ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆಯಲು ಸಾಧ್ಯವಾಗುವಂತಹ ಮಟ್ಟಕ್ಕೆ ಏರಲು ಸ್ಟಾರ್ಟಪ್‌ ಗಳಿಗೆ ಸಹಾಯ ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!