RECIPE| ರೆಸ್ಟೋರೆಂಟ್ ಶೈಲಿಯ ಗೋಬಿ 65, ಹೀಗೆ ಮಾಡಿದ್ರೆ ಟೇಸ್ಟ್‌ ಸೂಪರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೂಕೋಸಿನಿಂದ ಹಲವು ಬಗೆಯ ಖಾದ್ಯಗಳನ್ನು ಮಾಡುತ್ತೇವೆ..ಇಂದು ರೆಸ್ಟೋರೆಂಟ್ ಶೈಲಿಯಲ್ಲಿ ಗೋಬಿ 65 ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು:

ಹೂಕೋಸು – ಒಂದು,
ಮೈದಾ ಹಿಟ್ಟು – ಅರ್ಧ ಕಪ್,
ಕಾರ್ನ್ ಫ್ಲೋರ್ – 3 ಟೇಬಲ್ಸ್ಪೂನ್,
ಎಣ್ಣೆ – ಸಾಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ,
ಮೆಣಸಿನಕಾಯಿ – ಒಂದು ಚಮಚ,
ಕೊತ್ತಂಬರಿ ಪುಡಿ – ಒಂದು ಚಮಚ,
ಕಾಳುಮೆಣಸಿನ ಪುಡಿ – ಕಾಲು ಚಮಚ,
ಗರಂ ಮಸಾಲ – 3/4 ಚಮಚ,
ಉಪ್ಪು – ಸಾಕಷ್ಟು
ಅಡಿಗೆ ಸೋಡಾ – ಪಿಂಚ್
ಕತ್ತರಿಸಿದ ಕರಿಬೇವಿನ ಎಲೆಗಳು – ಸ್ವಲ್ಪ,
ಕತ್ತರಿಸಿದ ಕೊತ್ತಂಬರಿ ಸೊಪ್ಪು – ಸ್ವಲ್ಪ..

ತಯಾರಿಸುವ ವಿಧಾನ:

ಮೊದಲು ಹೂಕೋಸನ್ನು ತುಂಡು ಮಾಡಿ ಬಿಸಿ ನೀರಿಗೆ ಹಾಕಿ.. ಅದಕ್ಕೆ ಅರಿಶಿನ ಹಾಕಿ ಕಲಸಿ.ನಂತರ ಅವುಗಳನ್ನು ಸೋಸಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಮೈದಾ ಮತ್ತು ಕಾರ್ನ್ ಫ್ಲೋರ್ ತೆಗೆದುಕೊಂಡು ಒಂದು ಚಮಚ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಉಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಈಗ ಹಿಟ್ಟಿಗೆ ಸಾಕಷ್ಟು ನೀರು ಸೇರಿಸಿ ಸೇರಿಸಿಕೊಳ್ಳಬೇಕು. ಹಿಟ್ಟು ಹದವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ಹಿಟ್ಟು ಕಲಸಿದ ನಂತರ ಹೂಕೋಸು ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ..

ನಂತರ ಸ್ಟವ್ ಆನ್ ಮಾಡಿ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಹೂಕೋಸು ತುಂಡುಗಳನ್ನು ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾಗುವವರೆಗೆ ಫ್ರೈ ಮಾಡಿ ಮತ್ತು ತಟ್ಟೆಯಲ್ಲಿ ತೆಗೆದುಕೊಳ್ಳಿ. ಹೀಗೆ ತೆಗೆದ ಗೋಬಿಯನ್ನು ಮತ್ತೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕ್ಯಾರೆಟ್‌, ಈರುಳ್ಳಿ, ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ ಸೇರಿಸಿ ಒಂದು ನಿಮಿಷ ಬಾಡಿಸಿ ಇದಕ್ಕೆ ಸೋಯಾ ಸಾಸ್‌, ಚಿಲ್ಲಿ ಸಾಸ್‌ ಹಾಕಿ ಮಿಕ್ಸ್‌ ಮಾಡಿ ಕರಿದ ಗೋಬಿಯನ್ನು ಅದರೊಳಗೆ ಹಾಕಿ ಚೆನ್ನಾಗಿ ಕಲಕಿ ಮೇಲೆ ಕೊತ್ತೊಂಬರಿ ಸೊಪ್ಪು ಉದುರಿಸಿ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!