Monday, July 4, 2022

Latest Posts

ಯುವಕರನ್ನೇ ಹೆಚ್ಚು ಕಾಡುತ್ತಿದೆ ಕೋವಿಡ್‌ ಮೂರನೇ ಅಲೆ: ಐಸಿಎಂಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಮಿಕ್ರಾನ್‌ ರೂಪಾಂತರಿಯೊಂದಿಗೆ ದೇಶದಲ್ಲಿ ಕೋವಿಡ್‌ ಮೂರನೆ ಅಲೆ ಉತ್ತಂಗಕ್ಕೆ ಏರುತ್ತಿದ್ದು, ಈ ಬಾರಿಯ ಕೊತೋನಾ ಯುವಕರಲ್ಲಿ ಹೆಚ್ಚು ಕಾಡುತ್ತಿದೆ ಎಂದು ಐಸಿಎಂ ಆರ್‌ ತಿಳಿಸಿದೆ.
ದೇಶದ 37 ಆಸ್ಪತ್ರೆಗಳಿಂದ ಈ ಮಾಹಿತಿ ಪಡೆಯಲಾಗಿದೆ ಎಂದು ಐಸಿಎಂಆರ್‌ ನ ಮಹಾನಿರ್ದೇಶಕ ಡಾ. ಬಲರಾಮ್‌ ಭಾರ್ಗವ್‌ ತಿಳಿಸಿದ್ದಾರೆ.
ಡಿ 16 2021ರಲ್ಲಿ ಆಸ್ಪತ್ರೆಗೆ ದಾಖಲಾದ ಸೋಂಕಿತರ ವಯಸ್ಸು 55 ಆಗಿತ್ತು. ಆದರೆ ಜ.17 2022ರ ಸಮಯದಲ್ಲಿ 44 ವರ್ಷದೊಳಗಿನ ಯುವಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಯುವಕರಿಗೆ ಕೊರೋನಾ ಹೊರತಾಗಿಯೂ ಇತರ ರೋಗಗಳು ಹೆಚ್ಚಾಗಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ
ಈ ನಡುವೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದೆ. ಭಾರತದಲ್ಲಿ ಮಾರ್ಚ್‌ ಹೊತ್ತಿಗೆ ಕೋವಿಡ್‌ ಮೂರನೇ ಅಲೆ ತಗ್ಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss