ಬರೋಬ್ಬರಿ 4.15 ಕೋಟಿ ಮೌಲ್ಯದ ರಕ್ತಚಂದನ ವಶ: ಆರೋಪಿಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ರಮವಾಗಿ ಸಾಗಿಸುತ್ತಿದ್ದ 4.15 ಕೋಟಿ ಮೌಲ್ಯದ ರಕ್ತಚಂದನ ಮರದ 316 ದಿಮ್ಮಿಗಳನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಪ್ರಾದೇಶಿಕ ವಲಯ ಮೂಡುಬಿದಿರೆ ಸಿಬ್ಬಂದಿಗಳ ಸಹಕಾರದೊಂದಿಗೆ ಜಪ್ತಿ ಮಾಡಿದ್ದಾರೆ.
ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಆಂಧ್ರಪ್ರದೇಶದ ನೆಲ್ಲೂರಿನ ಅಲಾಡಿ ರಾಜೇಶ್ ರೆಡ್ಡಿ, ಪಾಲಕ್ಕಾಡ್ ಆನಕ್ಕಲ್ ನ ಸುಭಾಸ್ ಎಂ, ತಿರುವಲೂರು ತಮಿಳುನಾಡಿನ ಪಾಲರಾಜ್ ಎಸ್, ಕೇರಳ ಆನಕ್ಕಲ್‌ನ ಶಾಮೀರ್ ಎಸ್, ಕೇರಳ ಆನಕ್ಕಲ್ ನ ಕುಂಞ ಮಹಮ್ಮದ್, ತಮಿಳುನಾಡಿನ ಅನಿಲ್ ಕುಮಾರ್ ಹಾಗೂ ತಮಿಳುನಾಡಿನ ದಿನೇಶ್ ಕುಮಾರ್ ಎಂ ಬಂಧಿತ ಆರೋಪಿಗಳು.
8308  ಕೆಜಿ ತೂಕದ ರಕ್ತಚಂದನ ಕೊರಡುಗಳು, ಸಾಗಾಣಿಕೆಗೆ ಬಳಸುತ್ತಿದ್ದ ಈಚರ್ ವಾಹನ , ಬೆಂಗಾವಲು ವಾಹನ ಮಹೇಂದ್ರ ಮೊರಾಝೋ ಕಾರ್‌ಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಘಟನೆ ಜೂನ್ ಒಂದರಂದು ಕಿಲ್ಪಾಡಿ ಕೆಂಚನಕೆರೆ ಎಂಬಲ್ಲಿ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!