ಹೊಸದಿಗಂತ ವರದಿ ಹುಬ್ಬಳ್ಳಿ:
ಪ್ರಧಾನಿ ಮಂತ್ರಿ ಸ್ವನಿಧಿಯಿಂದ ಸಮೃದ್ಧಿ ಯೋಜನೆಯಡಿ 4.27ಲಕ್ಷ ಜನರು ನೋಂದಣಿ ಮಾಡಿಸಿದ್ದು, 740 ಕೋಟಿ ರೂ. ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಎ. ರಾಮದಾಸ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆ ಸಮಾಜದ ಕಟ್ಟ ಕಡೆ ವ್ಯಕ್ತಿಗೆ ತಲುಪುವ ಉದ್ದೇಶದಿಂದ ಜಿಲ್ಲೆಗೊಬ್ಬರಿಗೆ ವೀಕ್ಷಕರ ನೇಮಿಸಲಾಗಿದ್ದು, ಧಾರವಾಡ ಜಿಲ್ಲೆ ಜವಾಬ್ದಾರಿಯನ್ನು ನಾನು ಸೂಕ್ತವಾಗಿ ನಿಭಾಯಿಸುತ್ತಿದ್ದೇನೆ ಎಂದರು.
ಈ ಯೋಜನೆ ಪತ್ರಿಕಾ ವಿತರಕರು, ಛಾಯಾಗ್ರಾಹಕ, ಬೀದಿ ಬದಿಯ ವ್ಯಾಪಾರಸ್ಥರು, ಕ್ಯಾಟಂರಿಂಗ್ ಸಿಬ್ಬಂದಿ, ಡೆಲಿವರಿ ಬಾಯ್ಸ್, ಸೇರಿದಂತೆ 25 ವಿಭಾಗದವರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.