ಟರ್ಕಿಯ ಮಲತ್ಯದಲ್ಲಿ 4.6 ತೀವ್ರತೆಯ ಪ್ರಬಲ ಭೂಕಂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟರ್ಕಿ ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಸಾವು ನೋವುಗಳು ದಿನೇ ದಿನೇ ಹೆಚ್ಚಳವಾಗಿದೆ. ಈ ನಡುವೆಯೂ ಇಂದು 4.6 ರ ತೀವ್ರತೆಯ ಭೂಕಂಪವು ಟರ್ಕಿಯ ಮಲತ್ಯದಲ್ಲಿ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 4.6 ರ ತೀವ್ರತೆಯ ಭೂಕಂಪವು ಟರ್ಕಿಯ ಮಲತ್ಯದಿಂದ 19 ಕಿಮೀ SW ನಷ್ಟು ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ಟ್ವಿಟರ್‌ ಪೋಸ್ಟ್‌ನಲ್ಲಿ ಪ್ರಕಟಿಸಿದೆ.

38.19 N ಮತ್ತು 38.23 E ಸ್ಥಳದಲ್ಲಿ 2 ಕಿಮೀ ಆಳದಲ್ಲಿ 05:03:43 (ಸ್ಥಳೀಯ ಕಾಲಮಾನ) ಭೂಕಂಪ ವರದಿಯಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳಿಂದ ಸತ್ತವರ ಸಂಖ್ಯೆ 20,783 ಕ್ಕೆ ಏರಿದೆ. ಸಿರಿಯಾ ಮತ್ತು ಟರ್ಕಿಯಲ್ಲಿ ಗಾಯಗೊಂಡವರ ಒಟ್ಟು ಸಂಖ್ಯೆ 75592 ಕ್ಕೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!