ನೇಪಾಳದಲ್ಲಿ ಎರಡು ಬಾರಿ ಭೂಕಂಪ: 4.7 ಮತ್ತು 5.3 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದ ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (NEMRC) ಪ್ರಕಾರ, ಬುಧವಾರ ಮುಂಜಾನೆ ನೇಪಾಳದ ಬಗ್ಲುಂಗ್ ಜಿಲ್ಲೆಯಲ್ಲಿ 4.7 ಮತ್ತು 5.3 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ.

ಬಗ್ಲುಂಗ್ ಜಿಲ್ಲೆಯ ಅಧಿಕಾರಿ ಚೌರ್ ಸುತ್ತಮುತ್ತ 01:23 (ಸ್ಥಳೀಯ ಕಾಲಮಾನ) ಕ್ಕೆ 4.7 ಅಳತೆಯ ಭೂಕಂಪ ಸಂಭವಿಸಿದೆ ಎಂದು NEMRC ಟ್ವೀಟ್ ಮಾಡಿದೆ.

ರಿಕ್ಟರ್ ಮಾಪಕದಲ್ಲಿ 5.3ರ ತೀವ್ರತೆಯ ಎರಡನೇ ಭೂಕಂಪವು ಬಾಗ್ಲುಂಗ್ ಜಿಲ್ಲೆಯ ಖುಂಗಾದ ಸುತ್ತಲೂ 02:07 (ಸ್ಥಳೀಯ ಕಾಲಮಾನ) ಕ್ಕೆ ಅಪ್ಪಳಿಸಿತು ಎಂದು ವರದಿಯಾಗಿದೆ.

ಪ್ರಸ್ತುತ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!