ಪೆರುವಿನಲ್ಲಿ ಬೆಳ್ಳಂಬೆಳಗ್ಗೆ 4.7 ತೀವ್ರತೆಯ ಪ್ರಬಲ ಭೂಕಂಪ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪೆರುವಿನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ಪೆರುವಿನ ಅಲಿಯಾಂಜಾ ಕ್ರಿಸ್ಟಿಯಾನಾದಿಂದ 48 ಕಿಮೀ ನೈಋತ್ಯಕ್ಕೆ ಭೂಕಂಪ ಅಪ್ಪಳಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಹೇಳಿದೆ.

ಭೂಕಂಪವು 03:11:49 (UTC+05:30)ರ ಸಮಯಕ್ಕೆ ಸಂಭವಿಸಿದ್ದು, 108.3 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ.
ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!