ವ್ಯಕ್ತಿ ಕಾಲಿಗೆ ಗುಂಡು ಹಾರಿಸಿ ಹಣ ದೋಚಿದ ಕಿರಾತಕರು: ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯ ಶಕ್ತಿ ನಗರದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ ಆತನ ಬಳಿಯಿದ್ದ ಹಣ ಲೂಟಿ ಮಾಡಿ 42 ವರ್ಷದ ವ್ಯಕ್ತಿಯನ್ನು ಗಂಭೀರ ಗಾಯಗೊಳಿಸಿರುವ ದಾರುಣ ಘಟನೆ ನಡೆದಿದೆ. ಜನವರಿ 14 ರಂದು ನಡೆದ ಈ ಘಟನೆ
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯ ಬಳಿ ಇದ್ದ 5 ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ.
ಘಟನೆಯ ವಿಡಿಯೋದಲ್ಲಿ ಆರೋಪಿಗಳು ಆತನ ಮೇಲೆ ಗುಂಡು ಹಾರಿಸಿ, ಲೂಟಿ ಮಾಡಿ ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ಕಾಣಬಹುದು.

ರಸ್ತೆಯಲ್ಲಿ ಜನ ಓಡಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರದೆ ನಿಸ್ಸಾಹಯಕರಾಗಿದ್ದರು. ಕೈಯಲ್ಲಿದ್ದ ಗನ್‌ ತೋರಿಸಿ ಎಲ್ಲರನ್ನು ಹೆದರಿಸಿದ ಕಿರಾತಕರು, ವ್ಯಕ್ತಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!