HEALTH | ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದ ಆಸನಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಮ್ಮ ದೇಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಚಳಿಗಾಲದ ಉದ್ದಕ್ಕೂ ಆರೋಗ್ಯ ಪೋಷಣೆಯು ಅಗತ್ಯ. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಂತೆ ನಮ್ಮ ಹೃದಯದ ಆಮ್ಲಜನಕದ ಅಗತ್ಯವು ಹೆಚ್ಚಾಗುತ್ತದೆ. ಇದರ ಜೊತೆಗೆ ಶೀತ ಹವಾಮಾನವು ಅಪಧಮನಿಗಳನ್ನು ಸಂಕುಚಿತಗೊಳಿಸುತ್ತದೆ, ಇದು ಹೃದಯವನ್ನು ತಲುಪುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇಡೀ ಪರಿಸ್ಥಿತಿಯ ಪರಿಣಾಮವಾಗಿ ಹೃದಯವು ಗಟ್ಟಿಯಾಗಿ ಕೆಲಸ ಮಾಡಬೇಕು, ಇದು ಹೃದಯಾಘಾತಕ್ಕೆ ಕಾರಣವಾಗಬಹುದು.

ಚಳಿಗಾಲದ ಸಮಯದಲ್ಲಿ ಹೃದಯಾಘಾತಗಳು ಹೆಚ್ಚಾಗಿ ಆಗುತ್ತವೆ ಹಾಗಾಗಿ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಚಳಿಗಾಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ, ವ್ಯಾಯಾಮ ಮತ್ತು ಯೋಗಾಸನಗಳು ಸಹಾಯವಾಗಲಿವೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮಾಡಬಹುದಾದ ಕೆಲವು ಯೋಗಾಸನಗಳು ಇಲ್ಲಿವೆ.

ಚಳಿಗಾಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾಡಬೇಕಾದ ಯೋಗ ಭಂಗಿಗಳು :

1. ವೃಕ್ಷಾಸನ
2. ತ್ರಿಕೋನಾಸನ
3. ಧನುರಾಸನ
4. ಸೇತು ಬಂಧಾಸನ
5. ಪಶ್ಚಿಮೋತ್ತನಾಸನ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!