September 10, 2026
Thursday, September 10, 2026
spot_img

ಒಂದೇ ಆ್ಯಪ್‌ನಲ್ಲಿ 4 ಸಾರಿಗೆ ಸೇವೆ: ಇನ್ಮುಂದೆ WhatsAppನಲ್ಲೇ ಬಸ್ ಟಿಕೆಟ್ ಬುಕ್ಕಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿಕೆಟ್ ಬುಕಿಂಗ್ ಪ್ರಕ್ರಿಯೆ ಜನರಿಗೆ ಸುಲಭವಾಗಲಿ ಅನ್ನೋ ಕಾರಣಕ್ಕೆ ಕರ್ನಾಟಕ ಸಾರಿಗೆ ಇಲಾಖೆ ಹೊಸ ಸೇವೆಯೊಂದನ್ನು ಜಾರಿಗೆ ತಂದಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರಲು ಇಲಾಖೆ ಸಜ್ಜಾಗಿದ್ದು, ಕರ್ನಾಟಕ ಮೊಬಿಲಿಟಿ ಆ್ಯಪ್‌ನಲ್ಲಿ KSRTC, NWKRTC, KKRTC ಹಾಗೂ BMTC ಸೇವೆಗಳನ್ನು ಒಂದೇ ಸೂರಿನಡಿ ತರಲಾಗಿದ್ದು ಪ್ರಯಾಣಿಕರು ಈ ಆ್ಯಪ್ ಮೂಲಕ ಸಾರಿಗೆ ಸೇವೆಗಳನ್ನು ಪಡೆಯಬಹುದಾಗಿದೆ.

ಈ ನಂಬರ್ ಗೆ ಮೆಸೇಜ್ ಮಾಡಿ

ಇದರ ಜೊತೆಗೆ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡುವ ಸೌಲಭ್ಯ ಆರಂಭಿಸಲಾಗಿದೆ. +91 6364940880 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿ, ಪ್ರಯಾಣದ ಸ್ಥಳ, ಗಮ್ಯಸ್ಥಾನ ಮತ್ತು ದಿನಾಂಕ ಆಯ್ಕೆ ಮಾಡಿಕೊಂಡು ಬಸ್ ಕಾಯ್ದಿರಿಸಬಹುದು. UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್ ಮೂಲಕ ಹಣ ಪಾವತಿಸಬಹುದಾಗಿದೆ. ಬುಕ್ಕಿಂಗ್‌ ಬಳಿಕ ಇ-ಟಿಕೆಟ್ ವಾಟ್ಸಾಪ್ ಹಾಗೂ ಇ-ಮೇಲ್‌ಗೆ ಬರಲಿದೆ.

ಟಿಕೆಟ್ ಕ್ಯಾನ್ಸಲ್ ಕೂಡ ಮಾಡಬಹುದು

ವಾಟ್ಸಾಪ್‌ನಲ್ಲೇ ಟಿಕೆಟ್ ರದ್ದುಪಡಿಸುವ ಅವಕಾಶವೂ ಇದ್ದು, ಇದಕ್ಕಾಗಿ PNR, ಮೊಬೈಲ್ ಸಂಖ್ಯೆ ಮತ್ತು Transaction Password ಅಗತ್ಯವಿದೆ. 24×7 KSRTC ಕರೆ ಕೇಂದ್ರ 080-26252625ಕ್ಕೆ ಸಂಪರ್ಕಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !