Friday, December 9, 2022

Latest Posts

ಬುಲೆಟ್ ಪ್ರೂಫ್ ಕಾರು ಬದಿಗಿಟ್ಟು ದಿಲ್ಲಿಯಲ್ಲಿ ಆಟೋ ಹತ್ತಿದ್ರು ಅಮೆರಿಕ ರಾಜತಾಂತ್ರಿಕ ತಜ್ಞರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಭಾರತದಲ್ಲಿರುವ ಯುಎಸ್ ರಾಜತಾಂತ್ರಿಕರಿಗೆ ಸರ್ಕಾರವು ಸಂಪೂರ್ಣ ಭದ್ರತೆಯನ್ನು ನೀಡಿದೆ. ಬುಲೆಟ್ ಪ್ರೂಫ್ ವಾಹನಗಳನ್ನೂ ಒದಗಿಸುವ ಮೂಲಕ ಸುರಕ್ಷಿತವಾಗಿರುವ ಹಾಗೆ ವ್ಯವಸ್ಥೆ ಮಾಡಿದ್ದರೂ ಸಹ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮೆರಿಕದ ನಾಲ್ವರು ಮಹಿಳಾ ರಾಜತಾಂತ್ರಿಕರು ಇದನ್ನೆಲ್ಲ ಬಿಟ್ಟು ಸಾಮಾನ್ಯರಂತೆ ತಿರುಗಾಡಿದ್ದಾರೆ.

ತಮ್ಮ ಬುಲೆಟ್ ಪ್ರೂಫ್ ಕಾರುಗಳನ್ನು ಬಿಟ್ಟು ಆಟೋರಿಕ್ಷಾಗಳಲ್ಲಿ ಸಂಚರಿಸಿದರು. ಸುಮ್ಮನೆ ನಗರದಲ್ಲಿ ತಿರುಗಾಡುವುದಲ್ಲದೆ ಅಧಿಕೃತ ಕಾರ್ಯಕ್ರಮಗಳಲ್ಲೂ ಆಟೋದಲ್ಲಿಯೇ ಪಾಲ್ಗೊಂಡಿದ್ದರು. ಮೇಲಾಗಿ ಆಟೋವನ್ನೂ ಸ್ವತಃ ಅವರೇ ಓಡಿಸಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅಮೆರಿಕದ ಅನ್ಎಲ್ ಮೇಸನ್, ರುತ್ ಹಾಂಬರ್ಗ್, ಷರೀಸ್ ಜೆ ಕಿಟ್ಟರ್‌ಮ್ಯಾನ್ ಮತ್ತು ಜೆನ್ನಿಫರ್ ಬೈವಾಟರ್ಸ್ ಎಂಬ ನಾಲ್ವರು ಮಹಿಳಾ ರಾಜತಾಂತ್ರಿಕರು ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಬುಲೆಟ್ ಪ್ರೂಫ್ ಕಾರುಗಳನ್ನೂ ಮಂಜೂರು ಮಾಡಲಾಗಿದೆ. ಆದರೆ, ಆ ಕಾರುಗಳನ್ನು ಬಿಟ್ಟು ಸಾಮಾನ್ಯ ಆಟೋಗಳಲ್ಲಿ ತಿರುಗಾಡುತ್ತಿದ್ದರು. ದೆಹಲಿಯ ಬೀದಿಗಳಲ್ಲಿ ಗುಲಾಬಿ ಬಣ್ಣದ ಆಟೋ ಜೊತೆಗೆ ಕಪ್ಪು ಬಣ್ಣದ ಆಟೋದಲ್ಲಿ ನಾಲ್ವರು ಪ್ರಯಾಣಿಸಿದರು.

ಈ ಆಟೋಗಳಲ್ಲಿ ದೆಹಲಿಯ ಬೀದಿಗಳನ್ನು ಸುತ್ತಿದರು. ಅಧಿಕೃತ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು. ಸಾಮಾನ್ಯ ನಾಗರಿಕರಂತೆ ಆಟೋದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ರಾಜತಾಂತ್ರಿಕರು ಸ್ಥಳೀಯ ಜನರೊಂದಿಗೆ ಸಂಬಂಧವನ್ನು ಬೆಳೆಸುವುದು ಮತ್ತು ಪರಸ್ಪರ ತಿಳಿದುಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಆಟೋದಲ್ಲಿ ತಿರುಗಾಡುವ ಮೂಲಕ ಸಂತಸದ ಜೊತೆಗೆ ಸಾಮಾನ್ಯ ಜನರ ಜೀವನದ ಬಗ್ಗೆಯೂ ಅರಿತಿದ್ದಾಗಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!