ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ.
ಸಿರಿಬಾಗಿಲಿನ ಮುಹಮ್ಮದ್ ಸುಬೈರ್ ರವರ ಪುತ್ರಿ ಆಯಿಷಾ ಸೆಯಾ (4) ಮೃತ ಪಟ್ಟವಳು.
ಮನೆ ಸಮೀಪ ಈ ದುರಂತ ನಡೆದಿದೆ ಶಾಲೆ ಬಿಟ್ಟು ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಅದೇ ಬಸ್ಸಿನಡಿ ಸಿಲುಕಿ ಈ ಘಟನೆ ನಡೆದಿದೆ. ಸ್ಥಳೀಯರು ಧಾವಿಸಿ ಬಂದು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದಳು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.