4 ವರ್ಷಗಳ ಕ್ರಿಕೆಟ್‌ ವೇಳಾಪಟ್ಟಿ ರಿಲೀಸ್: ನಡೆಯಲಿದೆ ಒಟ್ಟು 777 ಪಂದ್ಯಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ (ಐಸಿಸಿ) 2023-2027ರ ಪುರುಷರ ಕ್ರಿಕೆಟ್​​ ಫ್ಯೂಚರ್ಸ್​ ಟೂರ್ಸ್ ಆ್ಯಂಡ್​​ ಪ್ರೊಗ್ರಾಮ್ಸ್​(ಎಫ್​ಟಿಐ) ಸಿದ್ಧಪಡಿಸಿದೆ. ಒಟ್ಟು 777 ಪಂದ್ಯಗಳು ನಡೆಯಲಿವೆ. ಟೀಂ ಇಂಡಿಯಾ 20 ಟೆಸ್ಟ್​​ ಪಂದ್ಯಗಳಲ್ಲಿ ಭಾಗಿಯಾಗಲಿದೆ.

2023ರಲ್ಲಿ ಭಾರತ ಬಹುನಿರೀಕ್ಷಿತ ಬಾರ್ಡರ್​​​-ಗವಾಸ್ಕರ್ ಟ್ರೋಫಿ ಆಯೋಜಿಸಲಿದ್ದು, ಇದರಲ್ಲಿ ಆಸ್ಟ್ರೇಲಿಯಾ ಪಾಲ್ಗೊಳ್ಳಲಿದೆ. ಫೆಬ್ರವರಿ-ಮಾರ್ಚ್​ ಅವಧಿಯಲ್ಲಿ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿ ನಿಗದಿಯಾಗಿದೆ. ಇದಾದ ಬಳಿಕ ಭಾರತ ತಂಡ ವೆಸ್ಟ್​ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. 2024ರಲ್ಲಿ ಭಾರತ ತಂಡ ಇಂಗ್ಲೆಂಡ್​, ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ಟೂರ್ನಿಗೆ ಆತಿಥ್ಯ ವಹಿಸಲಿದೆ.

ವೇಳಾಪಟ್ಟಿಯಲ್ಲಿ ಒಟ್ಟು 777 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿದ್ದು, 12 ತಂಡಗಳು ಭಾಗಿಯಾಗಲಿವೆ. 2024ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 2025ರಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡು ಐದು ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ. 2026ರಲ್ಲಿ ಆಫ್ಘಾನಿಸ್ತಾನ ಭಾರತ ಪ್ರವಾಸ ಕೈಗೊಳ್ಳಲಿದ್ದು ಏಕಮಾತ್ರ ಟೆಸ್ಟ್​ ಪಂದ್ಯದಲ್ಲಿ ಸೆಣಸಲಿವೆ. 2023-27ರ ವೇಳಾಪಟ್ಟಿಯಲ್ಲಿ ಭಾರತ ಅಂತಿಮವಾಗಿ(2027) ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ನಡೆಯಲಿದೆ ಭಾಗಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!