2032ರ ಬ್ರಿಸ್ಬೇನ್ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಸರ್ವ ಪ್ರಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್
2032 ರ ʼಬ್ರಿಸ್ಬೇನ್ ಒಲಿಂಪಿಕ್ಸ್‌ʼನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ  ʼಕ್ರಿಕೆಟ್‌ ಆಸ್ಟ್ರೇಲಿಯಾʼ ಮುಂದಿಡಿ ಇಟ್ಟಿದೆ.
ಅದಕ್ಕೂ ಮುನ್ನ 2028 ರಲ್ಲಿ ಲಾಸ್‌ ಏಂಜಲೀಸ್‌ ನಲ್ಲಿ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಹಾಗಿದ್ದರೂ ಆ ಒಲಂಪಿಕ್ಸ್ನಲ್ಲಿ ಕ್ರಿಕೆಟ್‌ ಸೇರ್ಪಡೆ ಸಾಧ್ಯತೆಗಳು ಕ್ಷೀಣ. ಆದೇನೇ ಆಗಿರಲಿ ತನ್ನ ತವರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಇರಲೇಬೇಕು ಎಂಬುದು ಕ್ರಿಕೆಟ್‌ ಆಸ್ಟ್ರೇಲಿಯಾದ ಮಹತ್ವಾಕಾಂಕ್ಷೆ.
ಕ್ರಿಕೆಟ್‌ ಆಸ್ಟ್ರೇಲಿಯಾದ ಕ್ರೀಡಾ ಸಂಸ್ಕೃತಿಯ ಅವಿಭಾಜ್ಯ ಅಂಗ, ಅಲ್ಲದೆ ಕ್ರಿಕೆಟ್ ನಲ್ಲಿ ದೇಶದ ಸಾಧನೆಯೂ ಅತ್ಯುತ್ತಮವಾಗಿದೆ. ಆದ್ದರಿಂದ ಬ್ರಿಸ್ಬೇನ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಅನ್ನು ಸೇರ್ಪಡೆಗೊಳಿಸಲು ಕ್ರಿಕೆಟ್‌ ಆಸ್ಟ್ರೇಲಿಯಾ ಕಾರ್ಯತಂತ್ರ ರೂಪಿಸಿದೆ.
ಒಲಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಕೊನೆಯದಾಗಿ ಕಾಣಿಸಿಕೊಂಡಿದ್ದು 1900ರಲ್ಲಿ. 2032ರ ಬ್ರಿಸ್ಬೇನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಮರಳಿದರೆ ಅದು ಹೆಮ್ಮೆಯ ವಿಚಾರವಾಗಲಿದೆ. ಈ ನಿಟ್ಟಿನಲ್ಲಿ ಕ್ರಿಕೆಟ್‌ ಅನ್ನು ಕ್ರೀಡಾಕೂಟದಲ್ಲಿ ಸೇರಿಸುವುದು ನಮ್ಮ ಗುರಿಯಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿದೆ. ಇತ್ತೀಚೆಗೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ʼಕಾಮನ್‌ ವೆಲ್ತ್‌ ವನಿತಾ ಕ್ರಿಕೆಟ್ʼನಲ್ಲಿ ಆಸ್ಟೇಲಿಯಾ ಚಿನ್ನ ಗೆದ್ದು ಸಂಭ್ರಮಿಸಿತ್ತು.
2028 ರ ಒಲಿಂಪಿಕ್ಸ್‌ನ ಸೇರ್ಪಡೆಗೆ ಇತರ 8 ಕ್ರೀಡೆಗಳೊಂದಿಗೆ ಕ್ರಿಕೆಟ್ ಅನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ಬಗ್ಗೆ ಐಸಿಸಿ ಒಲಿಂಪಿಕ್ ಸಮಿತಿಯೊಂದಿಗೆ ಚರ್ಚೆ ನಡೆಸುತ್ತಿದೆ. ಆತಿಥೇಯ ನಗರವು ಯಾವುದೇ ಕ್ರೀಡೆಯನ್ನು ಸೇರಿಸಲು ಮನವಿ ಸಲ್ಲಿಸಿಬಹುದು. ಆದರೆ ಆ ಕ್ರೀಡೆ ಸೇರ್ಪಡೆಯಾಗಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅನುಮೋದನೆಯ ಅಗತ್ಯವಿದೆ.
2032 ರ ಒಲಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸುವುದು ಆಸ್ಟ್ರೇಲಿಯಾದಲ್ಲಿ ʼಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹʼ ನೀಡುವ ಯೋಜನೆಯ ಭಾಗವಾಗಿದೆ. ಒಲಂಪಿಕ್ಸ್‌ ವೀಕ್ಷಕರ ಸಂಖ್ಯೆ ಹೆಚ್ಷಿಸುವುದು ಮತ್ತು ವಿಶ್ವ ವೇದಿಕೆಯಲ್ಲಿ ಆಸ್ಟ್ರೇಲಿಯಾದ ಯಶಸ್ಸನ್ನು ಮುಂದುವರಿಸುವ ಗುರಿಯನ್ನು ಇದು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!