40.94 ಕೋಟಿ ರೂ. ಆಸ್ತಿಗೆ ಪ್ರಜ್ವಲ್ ರೇವಣ್ಣ ಒಡೆಯ!

ಹೊಸದಿಗಂತ ವರದಿ,ಹಾಸನ:

ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ೪೦.೯೪ ಕೋಟಿ ರೂಪಾಯಿ ಮೌಲ್ಯದ ಚರ, ಸ್ಥಿರಾಸ್ಥಿ ಹೊಂದಿರುವ ಬಗ್ಗೆ ಗುರುವಾರ ಸಲ್ಲಿಸಿದ ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದರು.

ಒಟ್ಟು ೫,೪೪ ಕೋಟಿ ಮೌಲ್ಯದ ಚರಾಸ್ತಿ, ೩೫.೪೦ ಕೋಟಿ ರೂ.ಮೊತ್ತದ ಆಸ್ತಿ ಹೊಂದಿರುವ ಬಗ್ಗೆ ಅಫಿಡವಿಟ್‌ನಲ್ಲಿ ವಿವರ ನಿಡಿದ್ದಾರೆ. ಸದ್ಯ ಅವರ ಬಳಿ ೯.೨೯ ಲಕ್ಷ ನಗದು ಇದ್ದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ ೫೬ ಲಕ್ಷ ನಗದು ಹೊಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೃಷಿಯಿಂದ ೨.೭೫ ಕೋಟಿ ಆದಾಯ ಗಳಿಸಿರುವ ಪ್ರಜ್ವಲ್ ಅವರು ಕೃಷಿಯೇತರ ಮೂಲಗಳಿಂದ ೧.೩೩ ಕೋಟಿ ಆದಾಯ ಗಳಿಕೆ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಬಳಿ ೩೧ ಹಸು, ನಾಲ್ಕು ಎತ್ತು, ಒಂದು ಟ್ರ‍್ಯಾಕ್ಟರ್ ಇವೆ. ಬೆಂಗಳೂರು ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ, ಅತ್ತೆ ಅನುಸೂಯರಿಂದ ೨೨ ಲಕ್ಷ, ಅತ್ತೆ ಶೈಲಜಾರಿಂದ ೧೦ ಸಾಲ, ಅಜ್ಜಿ ಚನ್ನಮ್ಮರಿಂದಲೂ ೨೩ ಲಕ್ಷ ಸಾಲ, ಕುಪೇಂದ್ರ ರೆಡ್ಡಿಯಿಂದ ಒಂದು ಲಕ್ಷ ಸಾಲ, ತಂದೆ ರೇವಣ್ಣರಿಂದ ೮೬ ಲಕ್ಷ, ಸಹೋದರ ಡಾ.ಸೂರಜ್‌ ರೇವಣ್ಣ ಅವರಿಂದ ೧ ಕೋಟಿ ರೂ.ಒಳಗೊಂಡು ಒಟ್ಟು ೪.೪೮ ಕೋಟಿ ಸಾಲ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಸರ್ಕಾರಕ್ಕೆ ೩.೦೪ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಅಲ್ಲದೇ ೬೭ ಲಕ್ಷ ರೂಪಾಯಿ ಮೌಲ್ಯದ ಒಟ್ಟು ೧.೧೦ ಕೆ.ಜಿ ಚಿನ್ನ, ೧೭.೪೮ ಲಕ್ಷ ಮೌಲ್ಯದ ೨೩ ಕೆಜಿ ಬೆಳ್ಳಿ ಹಾಗು ೧.೯೦ ಲಕ್ಷ ಮೌಲ್ಯದ ವಜ್ರದ ಆಭರಣ ಹೊಂದಿರುವುದಾಗಿ ಲೆಕ್ಕ ತೋರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!