ಥಾಯ್ಲೆಂಡ್‌ನಲ್ಲಿ ಸಲಿಂಗ ವಿವಾಹಕ್ಕೆ ಸಿಕ್ಕಿತು ಕಾನೂನು ಮಾನ್ಯತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಲಿಂಗ ವಿವಾಹ ಕಾಯ್ದೆಗೆ ಥಾಯ್ಲೆಂಡ್‌ನಲ್ಲಿ ಅನುಮೋದನೆ ಸಿಕ್ಕಿದೆ.

ಇಂದು ಥಾಯ್ಲೆಂಡ್ ಸಂಸತ್ತಿನಲ್ಲಿ ಈ ಬಿಲ್ ಮಂಡಿಸಲಾಗಿತ್ತು. ಈ ಮೂಲಕ ದಕ್ಷಿಣ ಏಷ್ಯಾದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಥಾಯ್ಲೆಂಡ್ ಪಾತ್ರವಾಗಿದೆ.

ಇನ್ನು ಮುಂದೆ ಥಾಯ್ಲೆಂಡ್‌ನ ಯಾವುದೇ ಸಲಿಂಗಿಗಳು ಮದುವೆಯಾಗಲು ಕಾನೂನು ಮಾನ್ಯತೆ ಇದೆ. ಥಾಯ್ಲೆಂಡ್‌ನ ಕೆಳಮನೆಯಲ್ಲಿ ಈ ಬಿಲ್ ಇಂದು ಮಂಡಿಸಲಾಗಿತ್ತು. 415ರ ಸದಸ್ಯರ ಪೈಕಿ 400 ಮತಗಳನ್ನು ಪಡೆದಿದೆ. ಇನ್ನು 10 ಸದಸ್ಯರು ಕಾಯ್ದೆ ವಿರುದ್ಧ ಮತಚಲಾಯಿಸಿದ್ದರು.

ಥಾಯ್ಲೆಂಡ್ ಕೆಳಮನೆಯಲ್ಲಿ ಅಂಗೀಕಾರಗೊಂಡ ಈ ಕಾಯ್ದೆಯನ್ನು ಸೆನೆಟ್ ಕಳುಹಿಸಲಾಗುತ್ತದೆ. ಕೆಳಮನೆಯಲ್ಲಿ ಅನುಮೋದನೆ ಪಡೆದ ಬಿಲ್‌ಗೆ ಸೆನೆಟ್ ಸಹಿ ಹಾಕದೆ ಇದ್ದ ಉದಾಹರಣೆ ಕಡಿಮೆ. ಹೀಗಾಗಿ ಶೀಘ್ರದಲ್ಲೇ ಥಾಯ್ಲೆಂಡ್‌ನಲ್ಲಿ ಸೇಮ್ ಸೆಕ್ಸ್ ಮ್ಯಾರೇಜ್ ಕಾನೂನು ಅಧಿಕೃತವಾಗಿ ಜಾರಿಯಾಗಲಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದ ದಕ್ಷಿಣ ಏಷ್ಯಾದ ಮೊದಲ ರಾಷ್ಟ್ರ ಥಾಯ್ಲೆಂಡ್ ಆದರೆ, ಏಷ್ಯಾದ ಮೂರನೇ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಷ್ಯಾದಲ್ಲಿ ಥಾಯ್ಲೆಂಡ್‌ಗೂ ಮೊದಲು ತೈವಾನ್ ಹಾಗೂ ನೇಪಾಳದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇದೆ.

ಈ ಕಾನೂನು ಮೂಲಕ LGBTQ+ ಸಮುದಾಯಕ್ಕೆ ಥಾಯ್ಲೆಂಡ್ ಸರ್ಕಾರ ವಿಶೇಷ ಸವಲತ್ತು ಮಾಡಿಕೊಟ್ಟಿದೆ. ಇತರ ಎಲ್ಲಾ ದಂಪತಿಗಳಿಗೆ ಇರುವಂತಾ ಎಲ್ಲಾ ಸೌಲಭ್ಯ, ಅವಕಾಶ, ಹಕ್ಕುಗಳು ಸಲಿಂಗ ಜೋಡಿಗಳಿಗೂ ಇರಲಿದೆ ಎಂದು ಕಾಯ್ದೆ ಹೇಳುತ್ತದೆ. ಥಾಯ್ಲೆಂಡ್ ಸರ್ಕಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಐತಿಹಾಸಿಕ ಎಂದು ಬಣ್ಣಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!