Wednesday, February 8, 2023

Latest Posts

ತಿಥಿಯೂಟ ಕಾರ್ಯಕ್ರಮದಲ್ಲಿ ಮಿಕ್ಕಿದ್ದ ಆಹಾರ ಸೇವಿಸಿದ 40 ಜನರು ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೃತರ ಸ್ಮರಣಾರ್ಥ ಹಮ್ಮಿಕೊಂಡಿದ್ದ ತಿಥಿಯೂಟ ಕಾರ್ಯಕ್ರಮದಲ್ಲಿ ಮಿಕ್ಕಿದ್ದ ಆಹಾರವನ್ನು ಮರುದಿನ ಸೇವಿಸಿದ 40 ಜನರು ಅಸ್ವಸ್ಥರಾಗಿದ್ದಾರೆ.
ವಿಷಾಹಾರ ಸೇವನೆಯಂತಹ ರೋಗಲಕ್ಷಣಗಳಿಂದ ಬಳಲುತ್ತಿದ್ದ ಸಂತ್ರಸ್ತರು ಆಸ್ಪತ್ರೆಗೆ ದಾಳಲಾಗಿದ್ದಾರೆ. ರಾಮಾನುಜನಗರ ಅಭಿವೃದ್ಧಿ ಬ್ಲಾಕ್‌ನ ವಿಶುನ್‌ಪುರ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಇವರೆಲ್ಲರೂ ಆಹಾರವನ್ನು ಸೇವಿಸಿದ್ದರು ಎಂದು ಸೂರಜ್‌ಪುರ ಮುಖ್ಯ ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ.ಆರ್.ಎಸ್.ಸಿಂಗ್ ತಿಳಿಸಿದ್ದಾರೆ.
ನಂತರ ಅವರೆಲ್ಲರನ್ನೂ ಸೂರಜ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಹೇ ಶನಿವಾರ ಸಂಜೆ ‘ದಸ್ಗಾತ್ರ’ (ವ್ಯಕ್ತಿಯ ಮರಣದ ನಂತರ ಹತ್ತನೇ ದಿನದ ಆಚರಣೆ) ಗಾಗಿ ಬೇಯಿಸಿದ ಉಳಿದ ಆಹಾರವನ್ನು ಸೇವಿಸಿದ್ದರು ಎಂದು ಡಾ.ಸಿಂಗ್‌ ಹೇಳಿದ್ದಾರೆ.
ಆಹಾರವನ್ನು ಸೇವಿಸಿದ ಎರಡು-ಮೂರು ಗಂಟೆಗಳ ನಂತರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 40 ಜನರಲ್ಲಿ ಅಸ್ವಸ್ಥತೆ ಮತ್ತು ಆಹಾರ ವಿಷದಂತಹ ಲಕ್ಷಣಗಳು ಕಾಣಿಸಿಕೊಂಡಿದ್ದು, ನಂತರ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ವಿಷಕ್ಕೆ ನಿಖರವಾದ ಕಾರಣವನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!