ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್‌ ಬೌನ್ಸ್‌ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್​ವಿ ದತ್ತಾ ವಿರುದ್ಧ 41 ಚೆಕ್​ಬೌನ್ಸ್​ ಕೇಸ್​ಗಳು ದಾಖಲಾಗಿವೆ.

ಚೆಕ್‌ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ.
ರಾಜ್ಯ, ಹೊರ ರಾಜ್ಯಗಳಲ್ಲಿ ದತ್ತಾ ವಿರುದ್ಧ 2014 ರಿಂದ 2023ರ ವರೆಗೆ 41 ಚೆಕ್​​ಬೌನ್ಸ್​ ಪ್ರಕರಣಗಳು​ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.

ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಮಾಹಿತಿ ಇದೆ. 2022–23ನೇ ಸಾಲಿನಲ್ಲಿ ಅವರ ವಾರ್ಷಿಕ ಆದಾಯ ₹8.15 ಲಕ್ಷ ಇತ್ತು. ₹17.89 ಲಕ್ಷ ಮೌಲ್ಯದ ಚರಾಸ್ತಿ, ₹2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹93.19 ಲಕ್ಷ ಸಾಲ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!