ಅಗ್ನಿ ದುರಂತದಲ್ಲಿ ಸಾವಿಗೀಡಾದ 43 ಭಾರತೀಯರು: ಕುವೈತ್‌ ನತ್ತ ಕೇರಳ ಸಚಿವೆ ವೀಣಾ ಜಾರ್ಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದಕ್ಷಿಣ ಕುವೈತ್‌ನ ಅಹ್ಮದಿ ಗವರ್ನರೇಟ್‌ನಲ್ಲಿ ಜೂನ್ 12 ರಂದು ಮಂಗಾಫ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 43 ಭಾರತೀಯರು ಸಾವಿಗೀಡಾಗಿದ್ದಾರೆ. ಇದರಲ್ಲಿ 24 ಮಂದಿ ಕೇರಳದವರು. ಹೀಗಾಗಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕುವೈತ್‌ಗೆ ತೆರಳಲಿದ್ದಾರೆ.

ಕುವೈತ್‌ನಲ್ಲಿ ಸಾವಿಗೀಡಾದವರ ಪಾರ್ಥೀವ ಶರೀರವನ್ನು ತಮ್ಮ ಊರಿಗೆ ತ್ವರಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಜೊತೆಗೆ ಸಚಿವರು ಮತ್ತು ಅವರ ಅಧಿಕಾರಿಗಳ ತಂಡವು ಭಾರತೀಯ ಮತ್ತು ಕುವೈತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಿದೆ.

ಇದೇ ವೇಳೆ ಕೇರಳದ ಚಾವಕ್ಕಾಡ್ ಮೂಲದ ಬಿನೋಯ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ದುರ್ಘಟನೆ ನಡೆದ ಕಟ್ಟಡದೊಳಗೆ ಬಿನೋಯ್ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.

ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಆರೋಗ್ಯ ಸಚಿವರು ಇಲ್ಲಿ ಸಹಾಯ ಮಾಡುವ ಅಧಿಕಾರಿಗಳ ತಂಡವನ್ನು ಹೊಂದಿರುತ್ತಾರೆ. ಬೆಂಕಿ ಅವಘಡದಲ್ಲಿ 24 ಮಲಯಾಳಿಗಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿ ರಾಜೀವ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!