40,000 ಕೋಟಿ ರು ವಹಿವಾಟು, ಲಕ್ಷಾಂತರ ಉದ್ಯೋಗ ಸೃಷ್ಟಿ: ಪಶ್ಚಿಮ ಬಂಗಾಳದ ದುರ್ಗಾಪೂಜೆ ಅಂದ್ರೆ ಸುಮ್ನೆ ಅಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಅದ್ಧೂರಿ ದುರ್ಗಾ ಪೂಜೆ ಕೇವಲ ವಿಜೃಂಭಣೆಯ ಆಚರಣೆಯಲ್ಲ ಬದಲಾಗಿ, ಕನಿಷ್ಠ 40,000 ಕೋಟಿ ವಹಿವಾಟುಗಳನ್ನು ಒಳಗೊಂಡಿರುವ ಒಂದು ದೊಡ್ಡ ಆರ್ಥಿಕ ವ್ಯವಹಾರವಾಗಿದೆ.

ಐದು ದಿನಗಳು ನಡೆಯುವ ದುರ್ಗಾಪೂಜೆ ಸುಮಾರು ಮೂರು ಲಕ್ಷ ಜನರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತದೆ. ರಾಜ್ಯಾದ್ಯಂತ ಸುಮಾರು 40 ಸಾವಿರಕ್ಕೂ ಹೆಚ್ಚು ಸಮುದಾಯಗಳು ದುರ್ಗಾಪೂಜೆಯಲ್ಲಿ ಪಾಲ್ಗೊಳ್ಳುತ್ತವೆ. ಕೊಲ್ಕತ್ತಾದಲ್ಲಿಯೇ ಮೂರು ಸಾವಿರಕ್ಕೂ ಹೆಚ್ಚು ಸಮುದಾಯಗಳು ಪೂಜೆ ಆಚರಣೆಯಲ್ಲಿ ತೊಡಗುತ್ತವೆ. ಹೀಗಾಗಿ ವರ್ಷಕ್ಕೆ ಮೂರರಿಂದ ನಾಲ್ಕು ತಿಂಗಳು ಆರ್ಥಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ದುರ್ಗಾದೇವಿ ಪೂಜೆ ಆರಂಭಕ್ಕೂ ನಾಲ್ಕರಿಂದ ಐದು ತಿಂಗಳು ಮುಂಚಿತವಾಗಿಯೇ ಕೆಲಸಗಳು ಆರಂಭವಾಗುತ್ತವೆ, 40 ಸಾವಿರ ಕೋಟಿಯಷ್ಟು ವಹಿವಾಟು ನಡೆಯುತ್ತದೆ. ಇದರಿಂದ ಮೂರು ಲಕ್ಷ ಮಂದಿಗೆ ಉದ್ಯೋಗವಕಾಶ ದೊರೆಯುತ್ತದೆ. ಇಲ್ಲಿನ ಪೂಜಾ ಸಂಸ್ಥೆಗಳಿಂದಾಗಿ ಸೂಕ್ಷ್ಮ ಆರ್ಥಿಕತೆಯು ಉತ್ತೇಜನವನ್ನು ಪಡೆದುಕೊಳ್ಳುತ್ತದೆ ಎಂದು ಅಂಬ್ರೆಲ್ಲಾ ಸಂಸ್ಥೆಯ, ಫೋರಂ ಫಾರ್ ದುರ್ಗಾಸ್ತಾಬ್‌ನ ಅಧ್ಯಕ್ಷ ಪಾರ್ಥೋ ಘೋಷ್ ಹೇಳಿದ್ದಾರೆ.

ಐದು ದಿನದ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜನರು ಕಾರ್ಯನಿರ್ವಹಿಸುತ್ತಾರೆ. ಪೆಂಡಾಲ್ ಹಾಕುವವರು, ವಿಗ್ರಹಗಳನ್ನು ತಯಾರಿಸುವವರು, ಎಲೆಕ್ಟ್ರಿಷಿಯನ್, ಭದ್ರತಾ ಸಿಬ್ಬಂದಿ, ಅರ್ಚಕರು, ಢಾಕಿಗಳು, ವಿಗ್ರಹ ಸಾಗಣೆ ಮಾಡಲು ಕಾರ್ಮಿಕರು, ಭೋಜನ ಮತ್ತು ಊಟದ ತಯಾರಿ ಮಾಡುವವರು ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಉದ್ಯೋಗವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!