ಹಲ್‌ದ್ವಾನಿಯ ಜೈಲಿನಲ್ಲಿ ಮಹಿಳೆ ಸಹಿತ 45 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಉತ್ತರಾಖಂಡದ ಹಲ್‌ದ್ವಾನಿ (Haldwani Jail) ಜಿಲ್ಲೆಯಲ್ಲಿರುವ ಜೈಲಿನಲ್ಲಿ ಒಬ್ಬ ಮಹಿಳೆ ಸೇರಿ 45 ಕೈದಿಗಳಿಗೆ ಎಚ್‌ಐವಿ (ಏಡ್ಸ್)‌ ದೃಢಪಟ್ಟಿದೆ.

ಜೈಲಿನಲ್ಲಿರುವ ಕೈದಿಗಳಿಗೆ ಎಚ್‌ಐವಿಯ ಲಘು ಲಕ್ಷಣಗಳು ಕಂಡುಬಂದಿದ್ದು, ಮೊದಲಿಗೆ ಮಾತ್ರೆಗಳನ್ನು ನೀಡಲಾಗಿದೆ. ಇದಾದ ಬಳಿಕ ಜೈಲಧಿಕಾರಿಗಳು ಸಾಮೂಹಿಕವಾಗಿ ತಪಾಸಣೆ ನಡೆಸಿದಾಗ ಒಟ್ಟು 45 ಕೈದಿಗಳಿಗೆ ಸೋಂಕು ತಗುಲಿರುವ ವರದಿ ಬಂದಿದೆ.

ಎಚ್‌ಐವಿ ದೃಢಪಟ್ಟ ಕೈದಿಗಳ ಚಿಕಿತ್ಸೆಗಾಗಿಯೇ ಆಯಂಟಿರೆಟ್ರೋವೈರಲ್‌ ಥೆರಪಿ (ART) ಕೇಂದ್ರವನ್ನು ತೆರೆಯಲಾಗಿದೆ ಎಂದು ಸುಶೀಲ ತಿವಾರಿ ಆಸ್ಪತ್ರೆಯ ವೈದ್ಯ ಡಾ.ಪರಮ್‌ಜಿತ್‌ ಸಿಂಗ್‌ ಮಾಹಿತಿ ನೀಡಿದರು.

ನ್ಯಾಕೋ ಮಾರ್ಗಸೂಚಿಗಳ ಅನ್ವಯವೇ ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸೌಮ್ಯ ಲಕ್ಷಣ ಇರುವವರಿಗೆ ಉಚಿತವಾಗಿ ಔಷಧಗಳನ್ನೂ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು. ಏಕಕಾಲಕ್ಕೆ ಇಷ್ಟೊಂದು ಜನರಿಗೆ ಹೇಗೆ ಎಚ್‌ಐವಿ ತಗುಲಿತು ಎಂಬುದೇ ಈಗ ಪ್ರಶ್ನೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಪ್ರಕಾರ, ಅಸುರಕ್ಷಿತ ಲೈಂಗಿಕ ಸಂಪರ್ಕ ಸೇರಿ ಹಲವು ಕಾರಣಗಳಿಂದ ಎಚ್‌ಐವಿ ದೃಢಪಡುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಒಮ್ಮೆ ಸೋಂಕು ದೃಢಪಟ್ಟರೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ನಿಧಾನವಾಗಿ ಕುಂದಿಸುತ್ತದೆ. ಬ್ಯಾಕ್ಟೀರಿಯಾ, ಸೋಂಕುಗಳ ವಿರುದ್ಧ ದೇಹವು ಹೋರಾಡುವುದನ್ನೇ ನಿಲ್ಲಿಸುವಷ್ಟು ಸಾಮರ್ಥ್ಯ ಎಚ್‌ಐವಿ ಸೋಂಕಿಗಿದೆ. ಎಚ್‌ಐವಿಗೆ ಚಿಕಿತ್ಸೆ ಸಾಧ್ಯವಿದ್ದು, ದೇಹವು ಮತ್ತೆ ರೋಗ ನಿರೋಧಕ ಶಕ್ತಿ ಉತ್ಪಾದಿಸುವಂತಾಗಲು 10 ವರ್ಷ ಚಿಕಿತ್ಸೆ ನೀಡಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!